ಕಂಪ್ಲಿ: ಪಟ್ಟಣದ ಈಶಾನ್ಯ ಸಾರಿಗೆ ಸಂಸ್ಥೆ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 2019-20ನೇ ಸಾಲಿನ ಶಾಸಕರ ಅನುದಾನ ₹ 2.40ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕೆಲ ತಿಂಗಳುಗಳಿಂದ ದುರಸ್ತಿ ಇಲ್ಲದೇ ಹಾಳಾಗಿದೆ.
ಬಸ್ ನಿಲ್ದಾಣದಲ್ಲಿ ಹಣ ಕೊಟ್ಟು ನೀರಿನ ಬಾಟಲ್ ಖರೀದಿಸಬೇಕು. ಇಲ್ಲ ಬಳಕೆಗೆ ಸೀಮಿತವಾಗಿರುವ ನಲ್ಲಿ ನೀರನ್ನೇ ಕುಡಿಯಬೇಕು. ಸದ್ಯ ಶುದ್ಧ ನೀರಿನ ಘಟಕದ ಸ್ಥಳದಲ್ಲಿ ಕೆಲವರು ಕಸ ಕಡ್ಡಿ ತ್ಯಾಜ್ಯ ಹಾಕುತ್ತಿದ್ದು ಅಶುದ್ಧ ವಾತಾವರಣವಿದೆ. ಕೆಲ ಕಿಡಿಗೇಡಿಗಳು ಕೊಳಾಯಿ ಮುರಿದಿದ್ದಾರೆ. ಇನ್ನಾದರು ಎಚ್ಚೆತ್ತು ದುರಸ್ತಿಗೆ ಕ್ರಮ ಕೈಗೊಳ್ಳಿ.
–ಪ್ರಯಾಣಿಕರು, ಕಂಪ್ಲಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.