₹12 ಲಕ್ಷ ದೋಚಿದ ಪ್ರಕರಣ– ಇಬ್ಬರ ಬಂಧನ   

7
ಬಂಧಿತರಿಂದ ₹9 ಲಕ್ಷ ವಶಪಡಿಸಿಕೊಂಡ ನಗರ ಪೊಲೀಸರು

₹12 ಲಕ್ಷ ದೋಚಿದ ಪ್ರಕರಣ– ಇಬ್ಬರ ಬಂಧನ   

Published:
Updated:
Deccan Herald

ದೊಡ್ಡಬಳ್ಳಾಪುರ: ಒಂದೂವರೆ ತಿಂಗಳ ಹಿಂದೆ ಬ್ಯಾಂಕಿನಿಂದ ಹಣ ಪಡೆದು ಕಾರಿನಲ್ಲಿ ಕುಳಿತಿದ್ದಾಗ ಬಂದ ಇಬ್ಬರು ಅಪರಿಚಿತರು ₹12 ಲಕ್ಷ ದೋಚಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ₹9 ಲಕ್ಷ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ವಿ. ಶಿವಕುಮಾರ್‌, ‘ಆಸ್ಪತ್ರೆಗೆ ಪಾವತಿ ಮಾಡಲು ನಗರದ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಜೂನ್‌ 29 ರಂದು ಮಂಜುನಾಥ್‌ ಎಂಬುವವರು ಹಣ ಪಡೆದು ಕಾರಿನಲ್ಲಿ ಆದಿತ್ಯ ಶಾಲೆಯ ಬಳಿಗೆ ಹೋಗಿದ್ದರು. ಆಗ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಮಂಜುನಾಥ್‌ ಅವರನ್ನು ಕಾರಿನ ಒಳಗೆ ತಳ್ಳಿ ಹಣ ದೋಚಿ ಹೋಗುತ್ತಿರುವ ದೃಶ್ಯ ಸಿಸಿ ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓ.ಜಿ. ಕುಪ್ಪಂ ಗ್ರಾಮದ ನಿವಾಸಿಗಳಾದ ಸರವಣನ್‌ (30), ವೆಂಕಟೇಶ್‌ (29) ಎಂಬುವವರನ್ನು ಬಂಧಿಸಲಾಗಿದೆ’ ಎಂದರು.

ಬಂಧಿತರು ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಬ್ಯಾಂಕಿನಿಂದ ಹಣ ತರುವವರ ಗಮನವನ್ನು ಬೇರೆಡೆಗೆ ಸೆಳೆದು ಹಣ ದೋಚುತ್ತಿದ್ದ ದೊಡ್ಡ ಗ್ಯಾಂಗ್‌ಗೆ ಸೇರಿದವರು. ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲೂ ಇಂತಹದ್ದೇ ಪ್ರಕರಣ ನಡೆದಿತ್ತು. ಇದಲ್ಲದೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸರಗಳವು ಪ್ರಕರಣದಲ್ಲೂ ಇವರ ಪಾತ್ರ ಇರುವ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ. ಮೂರು ದಿನಗಳ ಹಿಂದೆ ನಗರದ ಚಿಕ್ಕಪೇಟೆಯಲ್ಲಿನ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆ ಬಳಿ ₹2 ಲಕ್ಷ ದೋಚಿ ಪರಾರಿಯಾಗಿರುವ ಪ್ರಕರಣವು ತನಿಖಾ ಹಂತದಲ್ಲಿದೆ ಎಂದರು.

ಓ.ಜಿ.ಕುಪ್ಪುಂ ಗ್ಯಾಂಗ್‌ ಇಂತಹ ಪ್ರಕರಣಗನ್ನು ನಡೆಸುವಲ್ಲಿ ಹೆಚ್ಚು ಸಕ್ರಿಯವಾಗಿದೆ. ಅಂತರರಾಜ್ಯ ದರೋಡೆಕೋರರ ತಂಡ ಇದಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ದೊರೆತ ಅಸ್ಪಷ್ಟವಾದ ಭಾವಚಿತ್ರದ ಮಾಹಿತಿ ಆಧಾರದ ಮೇಲೆಯೇ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಈ ವಿಚಾರದಲ್ಲಿ ಶ್ರಮ ವಹಿಸಿರುವ ನಗರ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಬಿ.ಕೆ. ಪಾಟೀಲ್‌ ಹಾಗೂ ಪೊಲೀಸ್‌ ಸಿಬ್ಬಂದಿ ಶಶಿಧರ್‌, ಪಾಂಡುರಂಗ, ಫೈರೋಜ್‌, ಕುಮಾರ್‌, ಮುತ್ತುರಾಜ್‌ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ. ಸಿದ್ದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !