ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ₹ 1 ಕೋಟಿ ಸಾಲ ವಿತರಣೆ: ರಾಘವೇಂದ್ರ

Last Updated 24 ಜೂನ್ 2021, 3:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಈಗಷ್ಟೇ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿದ್ದು, ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿರುವ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಬ್ಯಾಂಕಿನ ತಾಲ್ಲೂಕು ಘಟಕದ ಮೇಲುಸ್ತುವಾರಿ ಅಧಿಕಾರಿ ರಾಘವೇಂದ್ರ ಹೇಳಿದರು.

ತಾಲ್ಲೂಕಿನ ಕಂಟನಕುಂಟೆ ವ್ಯವಸಾಯ ಸೇವಾ ಸಹಕಾರ ಸಂಘದಿಂದ 180 ಜನ ರೈತರಿಗೆ ₹ 1 ಕೋಟಿ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಕರ ನೆರವಿಗಾಗಿ ಸಹಕಾರ ಸಂಘಗಳ ಮೂಲಕ ನೀಡುವ ಸಾಲವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ರೈತರು ಖಾಸಗಿ ವ್ಯಕ್ತಿಗಳಲ್ಲಿ ಸಾಲ ಪಡೆಯುವುದು ತಪ್ಪಲಿದೆ. ನಿಗದಿತ ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಂಘ ಆರ್ಥಿಕವಾಗಿ ಸದೃಢವಾಗಲಿದೆ. ಗ್ರಾಮದ ಇತರೇ ರೈತರಿಗೂ ಸಾಲ ಸೌಲಭ್ಯ ದೊರೆಯಲು ಸಹಕಾರಿಯಾಗಲಿದೆ ಎಂದರು.

ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸೇವಾ ಸಹಕಾರ ಸಂಘಗಳು ಇತರೆ ಬ್ಯಾಂಕಿಂಗ್‌ ವ್ಯವಸ್ಥೆಗಿಂತಲೂ ರೈತರಿಗೆ ಹತ್ತಿರ ಇರುವ ಸಂಸ್ಥೆಯಾಗಿದೆ. ಆಡಳಿತ ಮಂಡಳಿಗೆ ಎಲ್ಲರೂ ರೈತರೇ ಆಯ್ಕೆಯಾಗುವುದು ವಿಶೇಷವಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ಕೆ.ಎಂ. ಕೃಷ್ಣಮೂರ್ತಿ ಮಾತನಾಡಿ, ಸಹಕಾರಿ ಸಂಸ್ಥೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಿರ್ದೇಶಕರು ಇರಲಿದ್ದಾರೆ. ಹೀಗಾಗಿ ಸಹಕಾರ ತತ್ವದಡಿ ಕೆಲಸ ಮಾಡುವಾಗ ರಾಜಕೀಯ ಪಕ್ಷದ ನಂಟನ್ನು ಬದಿಗಿಟ್ಟು ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ಸಹಕಾರ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವ ಪಡೆದಿದ್ದ ಹಿರಿಯರು ರಾಜಕಾರಣದಲ್ಲಿ ಉನ್ನತ ಸ್ಥಾನಗಳಿಗೆ ಏರಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಂಟನಕುಂಟೆ ವಿಎಸ್‌ಎಸ್‌ಎನ್‌ಗೆ ₹ 1 ಕೋಟಿ ಸಾಲ ಮಂಜೂರು ಮಾಡಿಸಿದ ಬಿಡಿಸಿಸಿ ಬ್ಯಾಂಕ್‌ ಜಿಲ್ಲಾ ನಿರ್ದೇಶಕ ಜಿ. ಚುಂಚೇಗೌಡ ಅವರನ್ನು ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಆರ್‌. ಜಯಚಂದ್ರ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಟಿ. ನಾಗರಾಜ, ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ರಾಜಗೋಪಾಲ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿ ರವಿ, ಮುಖಂಡರಾದ ವಿ.ಎಸ್‌. ರಮೇಶ್‌, ಆನಂದ್‌ಕುಮಾರ್‌, ವಿ.ಎಸ್‌. ಸುರೇಶ್‌, ಶ್ರೀನಿವಾಸ್‌, ರಮೇಶ್‌ ಶೆಣೈ, ನಾಗರಾಜ್‌, ರಾಜಗೋಪಾಲ್‌, ಸಂಘದ ಸಿಇಒ ರಾಮಮೂರ್ತಿ, ಕಾರ್ಯದರ್ಶಿ ರಂಗನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT