ಆನೇಕಲ್: ಹೊನ್ನಕಲಶಾಪುರ ಗ್ರಾಮದ ಗೋಪಿ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ದರ್ಶನ್, ಲಿಖಿತ್, ನಿಖಿಲ್, ತೇಜಸ್, ಪ್ರಶಾಂತ್, ಲಿಖಿತ್ ಬಂಧಿತರು. ಆರೋಪಿಗಳು ಗೋಪಿಯನ್ನು ಕೊಲೆ ಮಾಡಿ ಡೆಂಕಣಿಕೋಟೆ ಬಳಿ ಎಸೆದು ಹೋಗಿದ್ದರಿಂದ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆನೇಕಲ್ ಪೊಲೀಸರು ಆರೋಪಿಗಳ ಪತ್ತೆಗೆ 7 ತಂಡ ರಚಿಸಿದ್ದರು. ತಮಿಳುನಾಡಿನ ಹೊಗನೇಕಲ್ ಬಳಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ವಾಹನಗಳಲ್ಲಿ ಪರಾರಿಯಾಗುತ್ತಿದ್ದಾಗ ತಮಿಳುನಾಡು ಪೊಲೀಸರು ಬಂಧಿಸಿ ಪೋಚಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವಾಹನ ಚಾಲಕ ರಘುನನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯ ಸೂತ್ರಧಾರ ಮೋಹನ್ಬಾಬುನನ್ನು ಪೊಲೀಸರು ವಿಚಾರಣೆ ನಡೆಸಿದ ನಂತರ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.