ಸೇವೆ, ತ್ಯಾಗಗಳ ಪ್ರತಿರೂಪ ನಿವೇದಿತಾ

7
ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ನೇ ವರ್ಷ ತುಂಬಿದ ಸವಿನೆನಪು

ಸೇವೆ, ತ್ಯಾಗಗಳ ಪ್ರತಿರೂಪ ನಿವೇದಿತಾ

Published:
Updated:
Deccan Herald

ವಿಜಯಪುರ: ‘ಸೇವೆ ಮತ್ತು ತ್ಯಾಗಗಳ ಪ್ರತಿರೂಪವೇ ಸಹೋದರಿ ನಿವೇದಿತಾ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಚಿಕ್ಕಬಳ್ಳಾಪುರ ಶಾಖೆಯ ಅಧ್ಯಕ್ಷ ಸ್ವಾಮಿ ಪೂರ್ಣಾನಂದ ಸ್ವಾಮೀಜಿ ಹೇಳಿದರು.

ಶಿಡ್ಲಘಟ್ಟ ಕ್ರಾಸ್ ನಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ನೇ ವರ್ಷ ತುಂಬಿದ ಸವಿನೆನಪಿಗಾಗಿ ಯುವ ಬ್ರಿಗೇಡ್ ವಿಜಯಪುರ ಇವರ ವತಿಯಿಂದ ಆಯೋಜಿಸಿದ್ದ ‘ದಿಗ್ವಿಜಯ ರಥಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅವರ ವ್ಯಕ್ತಿತ್ವ ಈ ದೇಶದ ಹೆಣ್ಣು ಮಕ್ಕಳಿಗೆ ಆದರ್ಶವಾಗಿದೆ. ಯುರೋಪ್‌ ದೇಶದಲ್ಲಿ ಹುಟ್ಟಿದ ಹೆಣ್ಣು ಮಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅನುಕರಣೆ ಮಾಡಿ ಈ ದೇಶಕ್ಕಾಗಿ ಸೇವೆ ಸಲ್ಲಿಸಿದರು ಎಂದರು.

ನಿವೇದಿತಾ ಪ್ರತಿಷ್ಠಾನದ ಸಂಚಾಲಕಿ ಭಾರತಿ ಪ್ರಭುದೇವ್ ಮಾತನಾಡಿ, ‘ಐರ್ಲೆಂಡ್ ಮೂಲದ ಸಹೋದರಿ ಭಾರತದಲ್ಲಿ ಮಹಿಳಾ ಶಕ್ತಿಗೆ ಪ್ರೇರಣೆ ದೊರಕಿಸಿದ ಮಹಾಮಾತೆಯಾಗಿದ್ದಾರೆ. ಪ್ರೀತಿ ಹಾಗೂ ಜ್ಞಾನದ ಮೂಲಕ ಭಾರತ ಈ ಹಿಂದೆಯೇ ಜಗತ್ತನ್ನು ಗೆದ್ದು ತೋರಿಸಿದ ಮಹಾನ್‌ ಕಾರ್ಯವನ್ನು ಸ್ವಾಮಿ ವಿವೇಕಾನಂದರು ಮಾಡಿ ತೋರಿಸಿದ್ದಾರೆ’ ಎಂದರು.

ಚಿಕಾಗೋದಲ್ಲಿ ವಿವೇಕಾನಂದರು ಆಡಿದ ಮಾತುಗಳ ಮೂಲಕ ಜಗತ್ತು ಭಾರತವನ್ನು ಅತ್ಯಂತ ಗೌರವಪೂರ್ವಕವಾಗಿ ನೋಡುವಂತಾಗಿದೆ. ಅಮೆರಿಕದ ಜನರ ಮನಸ್ಸು ಗೆಲ್ಲುವ ಕಾರ್ಯ ನಡೆಸಿದ್ದು ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

ಚಿಕ್ಕಬಳ್ಳಾಪುರದ ಕಡೆಯಿಂದ ಸಾಗಿಬಂದ ರಥಯಾತ್ರೆಗೆ ಶಿಡ್ಲಘಟ್ಟ ಕ್ರಾಸ್ ನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಡೊಳ್ಳು ಕುಣಿತದ ಕಲಾ ತಂಡದವರು ಹಾಗೂ ಮಹಿಳೆಯರು ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಿದರು. ಮಕ್ಕಳು ಸ್ವಾಮಿ ವಿವೇಕಾನಂದ ವೇಷಭೂಷಣಗಳನ್ನು ತೊಟ್ಟು ಎಲ್ಲರ ಗಮನಸೆಳೆದರು.

ಪುರಸಭಾ ಸದಸ್ಯ ಎಂ. ಸತೀಶ್ ಕುಮಾರ್, ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸಿದ್ದರಾಜು, ಸುರೇಶ್ ಬಾಬು, ಚ.ವಿಜಯಬಾಬು, ರುದ್ರಮೂರ್ತಿ, ಕನಕರಾಜು, ವಿಶ್ವನಾಥ್, ದೀಪಕ್ಕ, ಗೌರಮ್ಮ, ಕೃಷ್ಣಪ್ಪ ದಾಸರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !