ಅಕ್ರಮವಾಗಿ ಸಾಗಿಸುತ್ತಿದ್ದ 14 ಹಾವು, 4 ಸಸ್ತನಿ ರಕ್ಷಣೆ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 4 ಜನ ಪ್ರಯಾಣಿಕರ ತಂಡ ಅಕ್ರಮವಾಗಿ ಹಾವುಗಳು ಹಾಗೂ ಸಸ್ತನಿ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕಾಕ್‌ನಿಂದ ಕಾಡು ಪ್ರಾಣಿಗಳ ಪ್ರವರ್ಗಕ್ಕೆ ಸೇರುವ ಹಾವು, ಸಸ್ತನಿಗಳನ್ನು ಕಳ್ಳಸಾಗಣೆ ಮಾಡುತ್ತಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ಕಾರ್ಯಾಚರಣೆ ವೇಳೆ ಈ ಕೃತ್ಯ ಜ.22 ರಂದು ಪತ್ತೆಯಾಗಿದೆ.
ವಿಮಾನ ನಿಲ್ದಾಣದ ಚಕ್‌ಇನ್ ಬ್ಯಾಗ್‌ನಲ್ಲಿ ಹಾವುಗಳನ್ನು ಇರಿಸಿಕೊಂಡು ಬಂದಿದ್ದರು. ತಕ್ಷಣವೇ ಆರೋಪಿಗಳಿಂದ ವಶಕ್ಕೆ ಪಡೆದ ಹಾವುಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ.
ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಯುವಕರನ್ನು ಬಂಧಿಸಿದ್ದು, ತನಿಖೆ ವೇಳೆ ಬೆಂಗಳೂರು ಹೊರ ವಲಯದ ಫಾರ್ಮ್ ಹೌಸ್‌ನಲ್ಲಿ ಕಳ್ಳ ಸಾಗಣೆ ಮಾಡಿದ್ದ ಒಟ್ಟು 139 ಕಾಡು ಪ್ರಾಣಿಗಳು ಪತ್ತೆಯಾಗಿದ್ದು, ಅದರಲ್ಲಿ ವಿವಿಧ ಜಾತಿಯ ಕೋತಿ, ಪಕ್ಷಿಗಳು, ಅನಕೊಂಡ ಹಾವುಗಳು ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.