ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬೆಳವಂಗಲ ಜೋಡಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರ ಸೆರೆ: ಬಂಧಿತರ ಸಂಖ್ಯೆ 8ಕ್ಕೆ

Last Updated 2 ಮಾರ್ಚ್ 2023, 13:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲದಲ್ಲಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ನಡೆದ ಜೋಡಿ ಕೊಲೆ ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಐದನೇ ಆರೋಪಿ ಹುಲಿಕುಂಟೆ ಗ್ರಾಮದ ದೀಪು ಮತ್ತು ಭರತ್‌ ಎಂಬುವರನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಆರೋಪಿ ಭರತ್‌ ಹೆಸರು ಎಫ್‌ಐಆರ್‌ನಲ್ಲಿ ಇರಲಿಲ್ಲ.ಆರೋಪಿಗಳಿಗೆ ಸಹಕರಿಸಿದ ಹಾಗೂ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಇನ್ನೂ ಒಂಬತ್ತು ಆರೋಪಿಗಳನ್ನು ಬಂಧಿಸಬೇಕಿದೆ.

ಮೊದಲಿಗೆ ವಿನಯ್‌, ತ್ರಿಮೂರ್ತಿ ಎಂಬ ಆರೋಪಿಗಳನ್ನು ಪೊಲೀಸರು ಕಾಲಿಗೆ ಗುಂಡಿಟ್ಟು ಬಂಧಿಸಿದ್ದರು. ಅದಾದ ನಂತರ ಅನಿಲ್‌ ಎಂಬ ಆರೋಪಿಯು ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಿದ್ದ. ಉಳಿದಂತೆ ಬೆಂಗಳೂರಿನ ಹಂದರಹಳ್ಳಿ ನಿವಾಸಿಗಳಾದ ಸೋಮಶೇಖರ್‌, ಮುನ್ನಾ ಜತೆ ಒಬ್ಬ ಬಾಲಕನನ್ನು ಪೊಲೀಸರು ಬೆಂಗಳೂರಿನಲ್ಲಿಯೇ ಬಂಧಿಸಗದ್ದರು. ಈ ಪ್ರಕರಣದ ನಾಲ್ಕನೇ ಆರೋಪಿ ಹುಲಿಕುಂಟೆ ಗ್ರಾಮದ ಕೋರಿ ತಲೆಮರೆಸಿಕೊಂಡಿದ್ದಾನೆ.

ದೊಡ್ಡಬೆಳವಂಗಲದಲ್ಲಿ ಈಚೆಗೆ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ವೇಳೆ ನಡೆದ ಗಲಾಟೆಯಲ್ಲಿ ಚಾಕು ಇರಿತದಿಂದ ಭರತ್‌ಕುಮಾರ್‌ ಮತ್ತು ಪ್ರತೀಕ್‌ ಎಂಬ ಯುವಕರು ಮೃತಪಟ್ಟಿದ್ದರು.

ತೀವ್ರಗೊಂಡ ತನಿಖೆ: ದೊಡ್ಡಬೆಳವಂಗಲದಲ್ಲಿ ಕ್ರಿಕೆಟ್‌ ಆಟದ ಸಂದರ್ಭದಲ್ಲಿ ನಡೆದ ಚಾಕು ಇರಿತ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ಎಲ್ಲಾ ರೋಪಿಗಳನ್ನು ಆದಷ್ಟೂ ಬೇಗ ಬಂಧಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು, ತನಿಖೆಯ ಪ್ರಗತಿ ಕುರಿತಂತೆ ಪ್ರತಿದಿನ ಸಭೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚಿಸಿದ್ದಾರೆ.

ಈ ಕೊಲೆಗೆ ಇನ್ನೂ ನಿಖರ ಕಾರಣ ತಿಳಿದಿಲ್ಲ. ರಾಜಕೀಯ ಆಯಾಮಗಳ ಕುರಿತಂತೆಯೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT