ಮತದಾರರ ಮಿಂಚಿನ ನೋಂದಣಿ ಕಾರ್ಯದಡಿಯಲ್ಲಿ 2,400 ಅರ್ಜಿ ಸಲ್ಲಿಕೆ

ಸೋಮವಾರ, ಮಾರ್ಚ್ 18, 2019
31 °C
ವಿವಿಧ ಕಾರಣಗಳಿಂದ ಮತಗಟ್ಟೆಗಳ ಬದಲಾವಣೆ

ಮತದಾರರ ಮಿಂಚಿನ ನೋಂದಣಿ ಕಾರ್ಯದಡಿಯಲ್ಲಿ 2,400 ಅರ್ಜಿ ಸಲ್ಲಿಕೆ

Published:
Updated:
Prajavani

ದೇವನಹಳ್ಳಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪೂರ್ವಭಾವಿ ಸಿದ್ಧತೆಗಾಗಿ ವಿವಿಧ ಕಾರಣಗಳಿಂದ ಕೆಲವೊಂದು ಮತಗಟ್ಟೆಗಳನ್ನು ಬದಲಾವಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆಗೆ ಅಧಿಕೃತ ದಿನಾಂಕ ಪ್ರಕಟಗೊಂಡಿಲ್ಲ. ರಾಜ್ಯ ಚುನಾವಣಾ ಆಯುಕ್ತರ ಆದೇಶದಂತೆ ಸಿದ್ಧತೆ ಮಾಡಿಕೊಳ್ಳವುದು ಅಧಿಕಾರಿಗಳ ಕರ್ತವ್ಯ. 2019 ಫೆ.16ರಲ್ಲಿನ ಅಂಕಿ ಅಂಶದಂತೆ 1,99,306 ಮತದಾರಿದ್ದಾರೆ. ನಂತರ 2019 ಫೆ.23 ಮತ್ತು 24, ಮಾರ್ಚ್ 3ಮತ್ತು 4 ರಂದು ನಡೆದ ಮಿಂಚಿನ ಮತದಾರರ ನೋಂದಣಿ ಕಾರ್ಯ ದಡಿಯಲ್ಲಿ 2,400 ಅರ್ಜಿಗಳು ಸಲ್ಲಿಕೆಯಾಗಿವೆ. ಮತದಾರರಿಗೆ 1ರಿಂದ 11ರವರೆಗೆ ವಿವಿಧ ಶ್ರೇಣಿಯಲ್ಲಿ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಬದಲಾವಣೆಯಾಗಿರುವ ಮತಟ್ಟೆಗಳು: ಮತಗಟ್ಟೆ ಸಂಖ್ಯೆ 168 ಸರ್ಕಾರಿ ಹಿರಿಯ ಪಾಠಶಾಲೆ ಸೋಲೂರು, ಮತಗಟ್ಟೆ ಸಂಖ್ಯೆ 184 ಡಾ.ಬಾಬು ಜಗಜೀವನ್ ರಾಮ್ ಭವನ, ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿ ದೇವನಹಳ್ಳಿ ಟಾನ್, ಮತಗಟ್ಟೆ ಸಂಖ್ಯೆ 185 ಸರ್ಕಾರಿ ಅಂಗನವಾಡಿ ಕೇಂದ್ರ ವಾರ್ಡ್ ನಂ.16 ದೇವನಹಳ್ಳಿ ಟಾನ್, ಮತಗಟ್ಟೆ ಸಂಖ್ಯೆ 186 ಪೂಜಮ್ಮನ ಪಾಳ್ಯ ದೇವನಹಳ್ಳಿ ಟಾನ್, ಮತಗಟ್ಟೆ ಸಂಖ್ಯೆ 189 ಕೊಠಡಿ(1) ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ದೇವನಹಳ್ಳಿ ಟಾನ್, ಮತಗಟ್ಟೆ ಸಂಖ್ಯೆ 192 ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 2 ದೇವನಹಳ್ಳಿ ಟಾನ್, ಮತಗಟ್ಟೆ ಸಂಖ್ಯೆ 224 ಮತ್ತು 225 ಅರದೇಶನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ 1 ಮತ್ತು 2 ರಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗ್ರೇಡ್‌–2 ತಹಶೀಲ್ದಾರ್ ಬಾಲಕೃಷ್ಣ, ಚುನಾವಣಾ ಶಿರಸ್ತೇದಾರ್ ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಕಂದಾಯ ನಿರೀಕ್ಷಕ ರಾಜೇಂದ್ರ, ವಿವಿಧ ಪಕ್ಷಗಳ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !