ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಅಭಿವೃದ್ಧಿಗೆ ₹30 ಕೋಟಿ ಅನುದಾನ

ನಗರೋತ್ಥಾನದ 4ನೇ ಹಂತದಲ್ಲಿ ಹಣ ಬಿಡುಗಡೆ
Last Updated 22 ಆಗಸ್ಟ್ 2022, 3:57 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ ಅಭಿವೃದ್ಧಿಗಾಗಿನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಪುರಸಭೆಗೆ ₹30 ಕೋಟಿ ಅನುದಾನವನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್ ತಿಳಿಸಿದ್ದಾರೆ.

ಕ್ರಿಯಾಯೋಜನೆ ಅನುಮೋದನೆಗೊಂಡು ಟೆಂಡರ್‌ಗೆ ಹೋಗಿದೆ. ಇದರ ಜೊತೆಗೆ ಸ್ಥಳೀಯ ಮುಖಂಡರು ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪಟ್ಟಣದ ಪುರಸಭೆಗೆ ಭೇಟಿ ನೀಡಿದ ಅವರು, ಪಟ್ಟಣದ ಏಳಿಗಾಗಿ ಕೈಗೊಂಡಿರುವ ಕ್ರಮಗಳು, ವಸೂಲಿಯಾಗುತ್ತಿರುವ ತೆರಿಗೆಯ ಕುರಿತು ಮಾಹಿತಿ ಪಡೆದುಕೊಂಡು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಈ ಪುರಸಭೆ ಶತಮಾನ ಕಂಡಿದೆ. 50 ಸಾವಿರ ಮಂದಿ ಈ ವ್ಯಾಪ್ತಿಯಲ್ಲಿದ್ದಾರೆ. 23 ಮಂದಿ ಪುರಸಭೆ ಸದಸ್ಯರಿದ್ದಾರೆ. ಇದು ಇತಿಹಾಸ ಕಂಡಿರುವ ಪುರಾತನ ಪುರಸಭೆಯಾಗಿದ್ದು, ಪಟ್ಟಣದ ಅಭಿವೃದ್ಧಿಗಾಗಿ ವಿಶೇಷ ಗಮನಹರಿಸಲಾಗುತ್ತದೆ. ಸಾರ್ವಜನಿ
ಕರ ಬೇಡಿಕೆಯಂತೆ ಪುರಸಭೆ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಆದ್ಯತೆ
ಮೇರೆಗೆ ವಿಶೇಷ ಅನುದಾನ ನೀಡಲಾ
ಗುತ್ತದೆ. ಒಳಚರಂಡಿ ವ್ಯವಸ್ಥೆಗೂ ಒತ್ತು ನೀಡಲಾಗುತ್ತದೆ ಎಂದರು.

ಭೂಪರಿವರ್ತನೆ, ಯೋಜನೆ ಅನುಮೋದನೆ ಸ್ಥಳೀಯ ಸಂಸ್ಥೆಗಳಿಗೆ ಬರಲಿದೆ. ಗಡಿಯಿಂದ 300 ಮೀಟರ್ ದೂರದಲ್ಲಿರುವ ಭೂಮಿಯು ಕಂದಾಯ ಇಲಾಖೆಗೆ ಸೇರಿದ್ದರೂ ಭೂಪರಿವರ್ತನೆ ಮಾಡಲು ಅವಕಾಶವಿದೆ. ಮನೆಗಳು ಕಟ್ಟಿದ್ದರೆ, ಅವುಗಳನ್ನು ಸಕ್ರಮ ಮಾಡ
ಬಹುದಾಗಿದೆ. ಈ ಕುರಿತು ಕಾನೂನು ಕಾರ್ಯದರ್ಶಿ, ಕಾನೂನು ಮಂತ್ರಿ, ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. 15 ದಿನಗಳಲ್ಲಿ ಸರ್ಕಾರದಿಂದ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದರು.

ಮುಖ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ 2022-23ನೇ ಸಾಲಿನ ₹1 ಕೋಟಿ 31 ಲಕ್ಷ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಟೆಂಡರ್‌ಗೆ ಹೋಗಿದೆ. ವಿಶೇಷ ಅನುದಾನದಲ್ಲಿ ₹3 ಕೋಟಿ ಟೆಂಡರ್‌ಗೆ ಕೊಟ್ಟಿದ್ದೇವೆ. ₹1 ಕೋಟಿ 35 ಲಕ್ಷ ಡಿಸಿಬಿಯಿದೆ. ಬಹುತೇಕ ಕಟ್ಟಡಗಳು ಕಂದಾಯ ಇಲಾಖೆಯಡಿ ಇರುವ ಕಾರಣ
ತೆರಿಗೆ ಸಂಗ್ರಹ ಕಷ್ಟವಾಗುತ್ತಿದೆ ಎಂದರು.

ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಭಾಸ್ಕರ್,ಉಪಾದ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ವಿ.ನಂದಕುಮಾರ್, ರಾಜಣ್ಣ, ಶಿಲ್ಪಾ
ಅಜಿತ್, ಸಿ.ಎಂ.ರಾಮು, ನಾಮಿನಿ ಸದಸ್ಯರಾದ ಕನಕರಾಜು ಇದ್ದರು.

ಖಾಲಿ ಹುದ್ದೆ ಭರ್ತಿ

ಪುರಸಭೆಯಲ್ಲಿ ಖಾಲಿಯಿರುವ ಎಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಎಂ.ಟಿ.ಬಿ ನಾಗರಾಜ್ ಅವರು ತಮ್ಮ ಆಪ್ತ ಕಾರ್ಯದರ್ಶಿಗೆ ದೂರವಾಣಿ ಮೂಲಕ ಸೂಚಿಸಿದರು.

ಅಲ್ಲದೆ, ಈ ಕುರಿತು ಕೂಡಲೇ ಕಡತ ತಯಾರಿಸುವಂತೆ ತಿಳಿಸಿದರು.

ಗ್ರಾಮೀಣ ಭಾಗಕ್ಕೆ ಜಲಜೀವನ ಮಿಷನ್ ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ₹50 ಲಕ್ಷದಿಂದ ₹2 ಕೋಟಿವರೆಗೂ ಅನುದಾನ ಕೊಡಲಾಗುತ್ತಿದೆ. ಅಮೃತ ಯೋಜನೆಯನ್ನು ಅನುಷ್ಠಾನಗೊಳಿಸಿದರೆ, ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಸಮಸ್ಯೆ ನಿವಾರಣೆ ಮಾಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT