ಕಸಬಾ ವಿಎಸ್ಸೆಸ್ಸೆನ್ ₹3.88 ಲಕ್ಷ ಲಾಭ

7
ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ

ಕಸಬಾ ವಿಎಸ್ಸೆಸ್ಸೆನ್ ₹3.88 ಲಕ್ಷ ಲಾಭ

Published:
Updated:
Deccan Herald

ದೊಡ್ಡಬಳ್ಳಾಪುರ: ನಗರದ ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘವು 2017-18ನೇ ಸಾಲಿಗೆ 3.88 ಲಕ್ಷ ಲಾಭ ಪಡೆದಿದೆ ಎಂದು ಸಂಘದ ಅಧ್ಯಕ್ಷ ರೋಜಿಪುರ ಎನ್. ನಾಗರಾಜ್ ಹೇಳಿದರು.

ನಗರದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಘದ ವ್ಯಾಪ್ತಿಯ ರೈತರಿಗೆ 2017-18ನೇ ಸಾಲಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದ್ದ ಬೆಳೆ ಸಾಲದಲ್ಲಿ 108 ರೈತರಿಗೆ 47.20 ಲಕ್ಷ ಹಾಗೂ 2018ನೇ ಸಾಲಿನಲ್ಲಿ 73 ಜನ ರೈತರಿಗೆ 31.49 ಲಕ್ಷ ಸಾಲ ಮನ್ನಾ ಆಗಿದೆ. ರೈತರಿಗೆ ಸಕಾಲದಲ್ಲಿ ಬೆಳೆ ಸಾಲ ನೀಡುವಲ್ಲಿ ಹಾಗೂ ಸಂಘವನ್ನು ಪ್ರಗತಿಪಥದಲ್ಲಿ ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.

ಬೆಳೆ ಸಾಲ ಅಷ್ಟೇ ಅಲ್ಲದೆ ಆಭರಣ ಸಾಲವನ್ನು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ. ಪ್ರತಿ ವರ್ಷವು ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕರ ಸಮಾರಂಭದಲ್ಲಿ ನಗದು ಪುರಸ್ಕಾರ ನೀಡಿ ಶಿಕ್ಷಣಕ್ಕೂ ಉತ್ತೇಜನ ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಸಂಘದ ಸದಸ್ಯರಾದ ಗಂಗಮುತ್ತಯ್ಯ, ಕೆ.ಟಿ. ವೆಂಕಟಾಚಲಯ್ಯ ಮಾತನಾಡಿ, ಸಂಘಕ್ಕೆ ಪಾವತಿ ಮಾಡಿರುವ 5 ಸಾವಿರ ಷೇರು ಹಣವನ್ನು ಸದಸ್ಯರು ಹಿಂದಕ್ಕೆ ಪಡೆಯಲು ಸಂಘದಲ್ಲಿಯೇ ಸೌಲಭ್ಯ ಕಲ್ಪಿಸಬೇಕು. ಸಂಘಕ್ಕೆ ಶಾಶ್ವತ ಕಚೇರಿ ನಿರ್ಮಿಸಿಕೊಳ್ಳಲು ಹಲವಾರು ವರ್ಷಗಳಿಂದ ಸದಸ್ಯರು ಮನವಿ ಮಾಡುತ್ತಲೇ ಬರುತ್ತಿದ್ದರೂ ಸಂಘದ ಅಧ್ಯಕ್ಷರು, ನಿರ್ದೇಶಕರು ಪ್ರಯತ್ನ ನಡೆಸುತ್ತಿಲ್ಲ ಎಂದರು.

ಪತ್ರಕರ್ತ ರಾಜೇಂದ್ರಕುಮಾರ್ ಮಾತನಾಡಿ, ಸುಮಾರು 50 ವರ್ಷಗಳಷ್ಟು ಹಳೆಯದಾದ ಕಸಬಾ ವಿಎಸ್ಎಸ್ಎನ್ ರೈತರಿಗಷ್ಟೇ ಸಾಲ ಸೌಲಭ್ಯಗಳನ್ನು ನೀಡುವುದಕ್ಕೆ ಸೀಮಿತವಾಗದೆ ವಾಣಿಜ್ಯ ವ್ಯವಹಾರಗಳಿಗೂ ಆರ್ಥಿಕ ನೆರವು ನೀಡಬೇಕು. ಇದರಿಂದ ಸಂಘದ ವಹಿವಾಟು ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಡಿ. ಹನುಮಂತರಾಜು, ನಿರ್ದೇಶಕರಾದ ‌ವೈ.ಮಲ್ಲಪ್ಪ, ಎಂ. ಚನ್ನಬಸವಾರಾಧ್ಯ, ಕೆ.ಎಚ್. ರಂಗರಾಜು, ಜೆ.ಮಂಜುನಾಥ್, ಎಸ್.ಪದ್ಮನಾಭ, ಸಿ.ರಾಜಣ್ಣ, ಶೋಭ, ಯಶೋಧ, ಸಂಘದ ಕಾರ್ಯ ನಿರ್ವಾಹಣಾಧಿಕಾರಿ ಆರ್.ಎಂ. ರವಿಚಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !