‘₹6.67 ಲಕ್ಷ ಸಂದಾಯ–ಸಿ.ವಿಜಯಕುಮಾರ್

7
ಚುನಾವಣೆ ನಡೆಯದೆ ಇದ್ದರೇ ಸೂಪರ್ ಸೀಡ್‌ * ಸಕಾಲದಲ್ಲಿ ಹಣ ಸಂದಾಯವಾಗದ್ದಕ್ಕೆ ಗೊಂದಲ

‘₹6.67 ಲಕ್ಷ ಸಂದಾಯ–ಸಿ.ವಿಜಯಕುಮಾರ್

Published:
Updated:
Deccan Herald

ದೇವನಹಳ್ಳಿ: ತಾಲ್ಲೂಕಿನ ವಿಶ್ವನಾಥಪುರ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಪ್ರಕರಣ ಸಂಬಂಧ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವ ₹10.11 ಲಕ್ಷ ಹಣದ ಪೈಕಿ ₹6.67 ಲಕ್ಷ ಸಂಘಕ್ಕೆ ಸಂದಾಯವಾಗಿದ್ದು, ಉಳಿದ ಮೊತ್ತ ದಾಸ್ತಾನು ಇದೆ ಎಂದು ಸಂಘದ ಅಧ್ಯಕ್ಷ ಸಿ.ವಿಜಯಕುಮಾರ್ ತಿಳಿಸಿದರು.‌

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಮಾರಾಟ ವಹಿವಾಟಿನಲ್ಲಿ ₹6,30,135 ಮೊತ್ತದ ದಾಸ್ತಾನು ಕೊರತೆ ಇದೆ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದರು.

ವಾಸ್ತವದಲ್ಲಿ ಅನೇಕ ಬಾರಿ ರೈತರಿಗೆ ನಂಬಿಕೆ ಆಧಾರದ ಮೇಲೆ ಗೊಬ್ಬರವನ್ನು ಸಾಲ ನೀಡುವ ರೂಢಿ ಇದೆ. ಆದರೆ ರೈತರು ಸಕಾಲದಲ್ಲಿ ಹಣ ಮರು ಪಾವತಿಸದ ಕಾರಣ ದಾಸ್ತಾನಿನಲ್ಲಿ ಕೊರತೆ ಕಾಣುತ್ತಿದೆ ಎಂದರು.

ಸಹಕಾರ ಸಂಘದಲ್ಲಿ ಸಾಲ ಕೊಡುವುದು ಕಾನೂನುಬಾಹಿರ. ಆದರೆ, ಮಾನವೀಯ ನೆಲೆಗಟ್ಟಿನಲ್ಲಿ ರೈತರ ಹಿತ ಕಾಯುವ ಕೆಲಸ ಮಾಡಬೇಕಾಗಿದೆ. ಪರಸ್ಪರ ಹೊಂದಣಿಕೆ ಅತಿಮುಖ್ಯ ಎಂದರು.‌

ಕೊಯಿರಾ ಶಾಖೆಯ ಉಪ ಮಾರಾಟ ಕೇಂದ್ರದಲ್ಲಿಯೂ ಹಣ ದುರುಪಯೋಗವಾಗಿದೆ ಎಂದು ತನಿಖೆಯ ವರದಿಯಲ್ಲಿ ಉಲ್ಲೇಖವಾಗಿದೆ. ಅದು ಎಡವಟ್ಟಿನಿಂದ ಆಗಿರುವುದು ಅಷ್ಟೇ ಎಂದರು.

ಕೊಯಿರಾ ಶಾಖೆಯಲ್ಲಿ ಸ್ಥಳೀಯರ ಒತ್ತಾಯದ ಮೇರೆಗೆ ಮಾರಾಟ ಕೇಂದ್ರ ಪ್ರಾರಂಭಿಸಲಾಗಿತ್ತು. ವಹಿವಾಟಿನ ಜವಾಬ್ದಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಹಿಸಲಾಗಿತ್ತು ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹೆಚ್ಚಿನ ಒತ್ತಡವಿದ್ದ ಕಾರಣ, ಶಾಖೆಯ ಬಳಿಯಿದ್ದ ಕೆ.ಆರ್‌.ಪ್ರಭು ಎಂಬುವವರಿಗೆ ಖಾಸಗಿಯಾಗಿ ಜವಾಬ್ದಾರಿ ನೀಡಲಾಗಿತ್ತು ಎಂದು ತಿಳಿಸಿದರು.

ವಹಿವಾಟು ನಂತರ ಸಕಾಲದಲ್ಲಿ ಅವರು ಸಂಘಕ್ಕೆ ಹಣ ಪಾವತಿಸಿರಲಿಲ್ಲ. ಆದ್ದರಿಂದ ಹಣ ದುರುಪಯೋಗವಾಗಿದೆ ಎಂದು ಬಿಂಬಿತವಾಗಿದೆ. ಪ್ರಸ್ತುತ ಕೆ.ಆರ್‌.ಪ್ರಭು ಅವರು ₹4,58,200 ಪಾವತಿಸಿದ್ದಾರೆ; ಅದಕ್ಕೆ ಪೂರಕ ದಾಖಲೆಯೂ ಇದೆ ಎಂದರು.

ಕೆಲ ನಿರ್ದೇಶಕರು ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.

2014ರ ಡಿಸೆಂಬರ್‌ 20ರಂದು ₹12.80 ಲಕ್ಷ ವೆಚ್ಚದ ಕಾಮಗಾರಿಗೆ ಸಹಕಾರ ಸಂಘದ ಸಹಾಯಕ ನಿಬಂಧಕರಿಂದ ಅನುಮತಿ ಪಡೆದೇ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಆಗಸ್ಟ್ 26 ಕ್ಕೆ ಸಹಕಾರ ಸಂಘದ ಚುನಾವಣೆ ನಡೆಸಲೇಬೇಕು. ಇಲ್ಲದಿದ್ದರೆ ಸಂಘ ಸೂಪರ್ ನೀಡ್ ಆಗಲಿದೆ. ನೂತನ ಸಂಘ ಅರಂಭಕ್ಕೆ ಕಾಲಾವಕಾಶವಿಲ್ಲ. ಚುನಾವಣೆ ಸಂದರ್ಭದಲ್ಲಿ ಕೆಲವರು ಉದ್ದೇಶಪೂರ್ವವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !