ಶನಿವಾರ, ಜನವರಿ 28, 2023
15 °C

ಮಹಿಳಾ ಹಕ್ಕಿಗೆ ಹೋರಾಡಿದ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ (ಬೆಂ.ಗ್ರಾಮಾಂತರ): ಪಟ್ಟಣದ ಟಿಪ್ಪು ನಗರದಲ್ಲಿರುವ ಸಾವಿತ್ರಿ ಬಾಫುಲೆ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು.‌

ಟ್ರಸ್ಟ್‌ನ ಸಂಸ್ಥಾಪಕಿ ಎಸ್. ರವಿಕಲಾ ಮಾತನಾಡಿ, ಮಹಿಳೆಯರಿಗೆ ಎಲ್ಲಾ ರೀತಿಯ ಹಕ್ಕುಗಳಿವೆ. ದೌರ್ಜನ್ಯಕ್ಕೆ ತುತ್ತಾದಾಗ ರಕ್ಷಣೆ ಇದೆ. ಆಸ್ತಿಯಲ್ಲಿ ಪಾಲಿದೆ. ಆದರೆ, ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು
ಅಂಬೇಡ್ಕರ್ ಎಂದು
ಹೇಳಿದರು.

ಬೌದ್ಧ ಧರ್ಮ ಸ್ವೀಕರಿಸಿದ ಅವರು ಸುಮಾರು 2.5 ಲಕ್ಷ ಕೃತಿಗಳನ್ನು ಓದುವ ಮೂಲಕ ಪ್ರತಿಯೊಂದು ಕೃತಿಗೆ ತನ್ನದೇ ಆದ ಟಿಪ್ಪಣಿ ಬರೆದಿಟ್ಟಿದ್ದರು. ಹೀಗಾಗಿ, ಅವರ ಆದರ್ಶ ಎಲ್ಲರಿಗೂ ಮಾದರಿಯಾಗಬೇಕು. ಶಿಕ್ಷಣದ ಮೂಲಕ ದೇಶದ ಸಮಸ್ಯೆ ಬಗೆಹರಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.  

ಟ್ರಸ್ಟ್ ಸದಸ್ಯರಾದ ರತ್ನಮ್ಮ, ಶೋಭಾ, ಮುನಿಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಪವಿತ್ರ, ಮೇರಿ, ಲಕ್ಷ್ಮಮ್ಮ, ಪುಷ್ಪಮ್ಮ, ಆದಿತ್ಯ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.