ಮಂಗಳವಾರ, ಜನವರಿ 21, 2020
27 °C

ಎಡಿಎ ಅಧ್ಯಕ್ಷರಾಗಿ ಕೆ.ಜಯಣ್ಣ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ದೊಮ್ಮಸಂದ್ರದ ಕೆ.ಜಯಣ್ಣ ಅವರು ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಪಕ್ಷದ ಸಂಘಟನೆ ಮತ್ತು ಸಂಘ ಪರಿವಾರದಲ್ಲಿ ಕಾರ್ಯನಿರ್ವಹಿಸಿದ್ದರಿಂದ ವರಿಷ್ಠರು ಸೇವೆಯನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಸಹಕಾರ ಪಡೆದು ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಾಗುವುದು. ಆನೇಕಲ್‌ ಯೋಜನಾ ಪ್ರಾಧಿಕಾರದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಸ್ನೇಹಿಯಾಗಿ ಕೆಲಸ ಮಾಡಲಾಗುವುದು ಎಂದರು.

ನೂತನ ಅಧ್ಯಕ್ಷರನ್ನು ಆನೇಕಲ್‌ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಂಜೇಗೌಡ, ಪುರಸಭಾ ಸದಸ್ಯರಾದ ಮಂಜುಳ ನೀಲಕಂಠಯ್ಯ, ಶ್ರೀಕಾಂತ್‌, ಸುರೇಶ್‌, ಮುಖಂಡರಾದ ಸಿ.ಕೆ.ಜಗನ್ನಾಥ್‌, ಕೆ.ಸಿ.ರಾಮಚಂದ್ರ, ನೀಲಕಂಠಯ್ಯ, ಪಟಾಪಟ್‌ ಶ್ರೀನಿವಾಸ್, ಮಹೇಶ್‌ ಅಭಿನಂದಿಸಿದರು.

ಪ್ರತಿಕ್ರಿಯಿಸಿ (+)