ಭಾನುವಾರ, ಸೆಪ್ಟೆಂಬರ್ 26, 2021
28 °C
ದೇವನಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಶೇ.78ರಷ್ಟು ಮಾತ್ರ ಬಿತ್ತನೆ,

ನರೇಗಾ: ಚೆಕ್ ಡ್ಯಾಂಗೆ ಅವಕಾಶ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೇವನಹಳ್ಳಿ: 2018–19ನೇ ಸಾಲಿನ ಮುಂಗಾರಿನಲ್ಲಿ ತಾಲ್ಲೂಕಿನ ಒಟ್ಟಾರೆ ಕೃಷಿ ಚಟುವಟಿಕೆ ಬಿತ್ತನೆ ಶೇ.78ರಷ್ಟು ಮಾತ್ರ ಆಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್.ಮಂಜುಳಾ ತಿಳಿಸಿದರು .

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಜನವರಿಯಿಂದ ಸೆ.28 ರವರೆಗೆ 576 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 551 ಮಿ.ಮೀ ಇದೆ. 2017–18 ನೇ ಸಾಲಿನಲ್ಲಿ ಶೇ.98 ರಷ್ಟು ಬಿತ್ತನೆಯಾಗಿತ್ತು ಎಂದು ಸಭೆಗೆ ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿ ಮಾಡಿದ ನಾಲ್ಕು ವರ್ಷದಲ್ಲಿ ತಾಲ್ಲೂಕಿನಲ್ಲಿ 1300 ಕೃಷಿ ಹೊಂಡ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕೃಷಿ ಹೊಂಡ ಹೆಚ್ಚು ನಿರ್ಮಾಣ ಮಾಡಿದ ತಾಲ್ಲೂಕು ದೇವನಹಳ್ಳಿ, ಪ್ರಸ್ತುತ ಕೃಷಿ ಹೊಂಡಗಳು ಇತ್ತೀಚೆಗೆ ಸುರಿದ ಮಳೆಯಿಂದ ಶೇ.85 ರಷ್ಟು ನೀರಿನಿಂದ ತುಂಬಿವೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಇತ್ತೀಚೆಗೆ ರೈತರಿಗೆ ಯೂರಿಯಾ ಕೊರತೆ ಇದೆ ಎಂಬ ದೂರುಗಳು ಬರುತ್ತಿವೆ. ಕೆಲವು ಕಡೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಮತ್ತು ಕಳಪೆ ಗುಣಮಟ್ಟದ ಕೀಟನಾಶಕ ಮಾರಾಟವಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.

ಎಂ.ಎನ್ ಮಂಜುಳಾ ಮಾತನಾಡಿ, ‘ಯೂರಿಯಾ ಕೊರತೆ ಇಲ್ಲ. ಕೆಲವು ವ್ಯವಸಾಯ ಸೇವಾ ಸಹಕಾರ ಸಂಘಗಳು ನೇರವಾಗಿ ಖಾಸಗಿ ಕಂಪನಿಯಿಂದ ಖರೀದಿಸಿ ಮಾರಾಟ ಮಾಡುತ್ತಿವೆ. ಮತ್ತೆ ಕೆಲವು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಕೇಂದ್ರದ ಮೂಲಕ ಪಡೆದುಕೊಳ್ಳುತ್ತಿವೆ’ ಎಂದು ತಿಳಿಸಿದರು.

ಬೇರೆ ಕಡೆ ದಾಸ್ತಾನು ವ್ಯವಸ್ಥೆ ಇದ್ದು, ಒಂದೇ ಬಾರಿಗೆ ರೈತರು ಖರೀದಿಸಲು ಮುಂದಾಗುವುದರಿಂದ ದಾಸ್ತಾನು ಖಾಲಿಯಾಗಿ ಒಂದು ದಿನ ಪೂರೈಕೆಗೆ ವಿಳಂಬವಾಗಲಿದೆ ಎಂದರು.

ಯೂರಿಯಾ ಹೆಚ್ಚುವರಿ ಹಣ ವಸೂಲಿ ಬಗ್ಗೆ ಮಾಹಿತಿ ಇಲ್ಲ,. ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಸೂಚಿಸಿರುವ ಬೆಳೆಗಳಿಗೆ ಬಳಕೆ ಮಾಡುವ ಕೀಟನಾಶಕವನ್ನು ಮಾತ್ರ ಖರೀದಿಸುವಂತೆ ರೈತರಿಗೆ ಸೂಚಿಸಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.

ನರೇಗಾ ಯೋಜನೆಯಡಿ ಚೆಕ್ ಡ್ಯಾಂಗೆ ಕೃಷಿ ಇಲಾಖೆಯಲ್ಲಿ ಅವಕಾಶವಿಲ್ಲ. ಇಂಗು ಗುಂಡಿಗೆ ಕಳೆದ ವರ್ಷ 29 ಸಾವಿರ ನಿಗದಿಯಾಗಿತ್ತು. ಈ ವರ್ಷ 19 ಸಾವಿರಕ್ಕೆ ಸಿಮಿತಗೊಳಿಸಿದ್ದಾರೆ. 13 ಸಾವಿರದಲ್ಲಿ ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ನಿಗದಿ ಮಾಡಲಾಗಿದೆ. ಕಡಿಮೆ ಹಣವೆಂದು ರೈತರು ಮುಂದೆ ಬರುತ್ತಿಲ್ಲ, ರೈತರ ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಪಾಲನಾ ಇಲಾಖೆ ಅಧಿಕಾರಿಗಳು ಇಲಾಖೆಗಳ ಯೋಜನೆ ಅನುದಾನದ ಬಳಕೆ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು ನಂತರ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ನರೇಗಾ ಯೋಜನಾ ವ್ಯಾಪ್ತಿಯಲ್ಲಿ ಹತ್ತಾರು ಇಲಾಖೆಗಳಿವೆ. ಅಂತರ್ಜಲ ವೃದ್ಧಿಸಲು ಚೆಕ್ಕ್ ಡ್ಯಾಂಗೆ ಅದ್ಯತೆ ನೀಡಿಲಾಗುವುದು ಎಂದು ವಿವರಿಸಿದರು.

ಈ ಯೋಜನೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ₹15 ಸಾವಿರ ಜಾಬ್ ಕಾರ್ಡ್ ಇರುವ ತಾಲ್ಲೂಕಿನಲ್ಲಿ ಶೇಕಡವಾರು ಅಭಿವೃದ್ಧಿಯಾಗದಿದ್ದರೆ ಇನ್ನು 50 ವರ್ಷ ಕಳೆದರೂ ತಾಲ್ಲೂಕು ಅಭಿವೃದ್ಧಿಯಾಗಿಲ್ಲ. ಮಾರ್ಚ್ ಅಂತ್ಯಕ್ಕೆ ಶೇಕಡವಾರು ಪ್ರಗತಿಯಾಗಬೇಕು; ಜವಾಬ್ದಾರಿಯಿಂದ ಕೆಲಸ ಮಾಡಲೇಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರಡಯ್ಯ, ತಹಶೀಲ್ದಾರ್ ಎಂ.ರಾಜಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು