ಆನೇಕಲ್: ಮೂರನೇ ಮದುವೆ ನಿಶ್ವಿಥರ್ತಾಕ್ಕೆ ಸಜ್ಜಾಗಿದ್ದ ಟೆಕ್ಕಿಯೊಬ್ಬರ ವಿರುದ್ಧ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಚಿಕ್ಕನಾಯಕನಹಳ್ಳಿ ಮೂಲದ ರವಿ ಹಾಗೂ ಅವರ ಕುಟುಂಬದ ಒಂಬತ್ತು ಮಂದಿ ವಿರುದ್ಧ ಮಹಿಳೆಯರಿಗೆ ವಂಚನೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಎಚ್ಸಿಎಲ್ ಕಂಪನಿ ಉದ್ಯೋಗಿಯಾಗಿರುವ ಆರೋಪಿ ತಲೆಮರೆಸಿಕೊಂಡಿದ್ದಾರೆ.

ಇಬ್ಬರನ್ನು ಮದುವೆಯಾಗಿ ವಂಚಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮತ್ತೊಬ್ಬ ಹುಡುಗಿಯೊಂದಿಗೆ ನಿಶ್ವಿತಾರ್ಥ ಮಾಡಿಕೊಳ್ಳಲು ರವಿ ಸಜ್ಜಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಎರಡನೇ ಪತ್ನಿ ನೇಹಾ, ತನ್ನ ಪತಿ ರವಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

2025ರ ನವೆಂಬರ್ನಲ್ಲಿ ಆರೋಪಿಯು ಚನ್ನಪಟ್ಟಣದ ನೇಹಾ ಎಂಬುವರ ಜೊತೆ ಮದುವೆಯಾಗಿದ್ದ. ₹5ಲಕ್ಷ ವರದಕ್ಷಿಣೆ ಪಡೆದಿದ್ದ. ವರದಕ್ಷಿಣೆ ನೀಡದಿದ್ದರೆ ವಿಚ್ಛೇದನ ನೀಡುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ನೇಹಾ 2026ರ ಜನವರಿಯಲ್ಲಿ ದೂರು ನೀಡಿದ್ದರು.

‘ರವಿ ಮೊಬೈಲ್ಗೆ ಪದೇ ಪದೇ ಬರುತ್ತಿದ್ದ ಅನಾಮಿಕ ಮಹಿಳೆಯೊಬ್ಬರ ಕರೆಯನ್ನು ಪರಿಶೀಲಿಸಿದಾಗ ಅದು ಪಂಕಜಾ ಎಂಬುವರ ಕರೆ ಎಂದು ಗೊತ್ತಾಯಿತು. ಈ ಬಗ್ಗೆ ಪಂಕಜಾ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಐದು ವರ್ಷಗಳ ಹಿಂದಯೇ ರವಿ ತನ್ನನ್ನು ಮದುವೆಯಾದ ವಿಷಯವನ್ನು ಅವರು ತಿಳಿಸಿದರು. ಈ ಬಗ್ಗೆ ಪತಿಯನ್ನು ಕೇಳಿದಾಗ ಹಲ್ಲೆ ನಡೆಸಿದ. ಗರ್ಭಪಾತ ಮಾಡಿಸಿದ್ದ’ ಎಂದು ನೇಹಾ ದೂರಿನಲ್ಲಿ ಹೇಳಿದ್ದಾರೆ.

ರವಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ, ಭಾರತೀಯ ನ್ಯಾಯ ಸಂಹಿತೆ 351, 358(4), 115(2), 352(2). 89, 85, 88ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.