ಆನೇಕಲ್ : ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಮಾವುತರು ಮತ್ತು ಕಾವಡಿಗರ ಮಕ್ಕಳಿಗೆ ಟಿಐಇ ಇಂಡಿಯಾ ಕಂಪನಿಯಿಂದ ಉಚಿತವಾಗಿ ಕಲಿಕೋಪಕರಣ ವಿತರಿಸಲಾಯಿತು.
70 ಮಂದಿ ವಿದ್ಯಾರ್ಥಿಗಳಿಗೆ ಬನ್ನೇರುಘಟ್ಟ ಜಂಗಲ್ ಲಾಡ್ಜ್ ಆವರಣದಲ್ಲಿ ಕಲಿಕೋಪಕರಣ ಸ್ವೀಕರಿಸಿದರು.
ಕಂಪನಿಯ ಉಪಾಧ್ಯಕ್ಷ ಸಂತೋಷ್ ರಾವ್ ಮಾತನಾಡಿ, ಹಕ್ಕಿಪಿಕ್ಕಿ ಕಾಲೊನಿಯ ವಿದ್ಯಾರ್ಥಿಗಳು ಸೇರಿದಂತೆ ಮಾವುತರ ಮಕ್ಕಳಿಗೆ ಕಂಪನಿಯ ವತಿಯಿಂದ ಕಳೆದ ಎರಡು ವರ್ಷಗಳಿಂದ ಕಲಿಕೋಪಕರಣ ವಿತರಿಸುತ್ತಿದ್ದಾರೆ ಎಂದರು.
ಪೋಷಕರು ಮಕ್ಕಳು ಗೈರು ಹಾಜರಾಗದಂತೆ ಶಾಲೆಗೆ ನಿಯಮಿತವಾಗಿ ಕಳುಹಿಸಬೇಕು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಉನ್ನತ ಸ್ಥಾನಗಳನ್ನು ಪಡೆಯಲು ಸಾಧ್ಯ ಎಂದರು.
ಕಂಪನಿಯ ವ್ಯವಸ್ಥಾಪಕ ಅಭಿಜಿತ್ ಕಬೂರ್, ಸಿಎಸ್‌ಆರ್ ಮುಖ್ಯಸ್ಥ ರಾಘವೇಂದ್ರ ಇದ್ದರು.