ಆನೇಕಲ್:ವಾಣಿಜ್ಯ ಸಿಲಿಂಡರ್ ಅಭಾವದಿಂದ ಹೋಟೆಲ್ ಉದ್ಯಮ ತತ್ತರಿಸಿದ್ದು ಆನೇಕಲ್ ಪಟ್ಟಣದಲ್ಲಿ ಅಂದಾಜು 10ಕ್ಕೂ ಹೆಚ್ಚು ಸಣ್ಣ ಹೋಟೆಲ್ಗಳನ್ನು ಮುಚ್ಚಲಾಗಿದೆ. ಅತ್ತಿಬೆಲೆ, ಸರ್ಜಾಪುರ, ಜಿಗಣಿಯಲ್ಲಿಯೂ ಹಲವು ಹೋಟೆಲ್ಗಳಿಗೆ ಬೀಗ ಹಾಕಲಾಗಿದೆ.

ಹೋಟೆಲ್ನಲ್ಲಿ ಕೆಲಸ ಮಾಡುವ ಮ್ಯಾನೇಜರ್, ಬಾಣಸಿಗರು, ಸಪ್ಲೈಯರ್, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅಡುಗೆ ಅನಿಲದ ಕೊರತೆ ಬಿಸಿ ತಟ್ಟಿದೆ. ಸಿಬ್ಬಂದಿಯ ವೇತನ ಕಡಿತಗೊಳಿಸಲಾಗಿದೆ.

ಆಹಾರಗಳನ್ನು ಕಡಿಮೆ ತಯಾರಿಸುತ್ತಿರುವುದರಿಂದ ಕೆಲಸವು ಕಡಿಮೆಯಾಗಿದೆ. ಇದರಿಂದ ಹಲವು ಸಿಬ್ಬಂದಿಗೆ ತಾತ್ಕಲಿಕ ರಜೆ ನೀಡಲಾಗಿದೆ. ಇವರೆಲ್ಲ ಕೂಲಿ ಅಥವಾ ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ದೂರದ ಊರು ಸೇರಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾದ ಸಂಘರ್ಷ ಉಂಟಾದ ಬಳಿಕ ವಾಣಿಜ್ಯ ಬಳಕೆ ಸಿಲಿಂಡರ್ ಅಭಾವ ಉಂಟಾಗಿನಿಂದಲೂ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಹೋಟೆಲ್ನಲ್ಲಿ ಮೆನುನಲ್ಲಿ ಆಹಾರ ಪಟ್ಟಿ ಕಡಿಮೆಯಾದಂತೆ ಸಿಬ್ಬಂದಿ ಸಂಖ್ಯೆಯೂ ಇಳಿದಿದೆ.

‘ಹೋಟೆಲ್ನಲ್ಲಿ ಕೆಲಸ ಮಾಡಲು 100-200 ಕಿಮೀ ದೂರದಿಂದ ಆನೇಕಲ್ಗೆ ಬಂದಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಹೋಟೆಲ್ ನಡೆಸುವದೇ ಕಷ್ಟವಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸವಿಲ್ಲದೇ ಊರು ಸೇರಿದ್ದಾರೆ. ಇದಿ ಹೀಗೆ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಬಿಗಿಡಾಯಿಸಲಾಗಿದೆ. ಸಿಲಿಂಡರ್ ಅಭಾವದಿಂದ ಹೋಟೆಲ್ ಮಾಲೀಕರಿಗೆ ಮಾತ್ರ ಹೊಡೆತ ಬೀಳುವುದಿಲ್ಲ. ಬಡ ಸಿಬ್ಬಂದಿ, ವೇಟರ್ಗಳು ಮತ್ತು ಇತರೆ ಸಿಬ್ಬಂದಿಗಳಿಗೂ ಅದರ ಬಿಸಿ ತಟ್ಟಿದೆ ಎನ್ನುತ್ತಾರೆ’ ಸಿಬ್ಬಂದಿಯೊಬ್ಬರು.

ಸಿಲಿಂಡರ್ ಅಭಾವದಿಂದ ಬಹುತೇಕ ಎಲ್ಲಾ ಹೋಟೆಲ್ಗಳು ತತ್ತರಿಸಿವೆ. ಹೋಟೆಲ್ ಉದ್ಯಮ ಆನೇಕಲ್ನಲ್ಲಿ ನೆಲಕಚ್ಚುವ ಸಾಧ್ಯತೆಗಳಿದ್ದು ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆಯನ್ನು ಸರಳೀಕರಣಗೊಳಿಸಬೇಕು ಎಂಬುದು ಹೋಟೆಲ್ ಮಾಲೀಕರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-15-173465468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.