ಆನೇಕಲ್: ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸ ಆಗುತ್ತಿಲ್ಲ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಆನೇಕಲ್ ಘಟಕದಿಂದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನೂರಾರು ರೈತರು ಹಸಿರು ಶಾಲುಗಳನ್ನು ಹೊದ್ದು ಪ್ರತಿಭಟನೆ ನಡೆಸಿದರು. ‘ನಮ್ಮ ಭೂಮಿ ನಮ್ಮ ಹಕ್ಕು’, ‘ನಿಲ್ಲಲ್ಲಿ ನಿಲ್ಲಲಿ ಭ್ರಷ್ಟಾಚಾರ ನಿಲ್ಲಲಿ’ ಎಂದು ಘೋಷಣೆಗಳನ್ನು ಕೂಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ರೈತರು ಕೆಲಸಗಳು ಸುಗಮವಾಗಿ ಆಗುತ್ತಿಲ್ಲ. ಪಹಣಿ, ಪೋಡಿ, ಖಾತೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಅಲೆದಾಡುವಂತಾಗಿದೆ. ಭೂ ದಾಖಲೆಗಳು ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ತಾಲ್ಲೂಕು ಕಚೇರಿಯಲ್ಲಿ ಯಾವುದೇ ದಾಖಲೆಗಳಿಗೆ ಅರ್ಜಿ ಸಲ್ಲಿಸಿದರೂ ಕಾನೂನಾತ್ಮಕವಾಗಿಲ್ಲ ಎಂದು ಹೇಳುತ್ತಾರೆ, ಹಣ ನೀಡಿದರೆ ಕಾನೂನಾತ್ಮಕವಾಗಿದೆ ಎನ್ನುತ್ತಾರೆ. ಈ ಬಗ್ಗೆ ತಹಶೀಲ್ದಾರ್ ಅವರು ಕ್ರಮ ಕೈಗೊಂಡು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಮಂಜುನಾಥ್ ಒತ್ತಾಯಿಸಿದರು.

ಸರ್ಕಾರಿ ಭೂಮಿಯ ದಾಖಲೆಗಳನ್ನು ತಿದ್ದಿದ 16 ಮಂದಿ ವಿರುದ್ಧ ಎಫ್ಐಆರ್ ಆಗಿದೆ. ಆದರೂ ಅವರನ್ನು ಕೆಲಸದಿಂದ ಅಮಾನತು ಮಾಡಲಿಲ್ಲ. ಭೂಮಿಯ ಬೆಲೆ ಹೆಚ್ಚಾದಂತೆ ಸರ್ಕಾರಿ ಭೂಮಿಯ ರಕ್ಷಣೆ ಕಷ್ಟವಾಗಿದೆ. ಬಲಾಢ್ಯರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡುತ್ತಿದ್ದಾರೆ. ಸರ್ಕಾರಿ ಭೂಮಿಯ ಒತ್ತುವರಿಗೆ ತೆರವಿಗೆ ಆದ್ಯತೆ ನೀಡಬೇಕು. ಮುತ್ತಾನಲ್ಲೂರು ಅಮಾನಿಖಾನೆಯಲ್ಲಿ ನೀರು ನಿಂತಿದೆ, ಕೆರೆಯ ನೀರು ಖಾಸಗಿ ಜಮೀನಿಗೂ ಬಂದಿದೆ. ಇದರಿಂದಾಗಿ ಕೃಷಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ತಾಲ್ಲೂಕಿನಲ್ಲಿ ಕೆರೆಗಳು ಒತ್ತುವರಿಯಾಗುತ್ತಿದೆ, ಗೋಮಾಳ, ಸ್ಮಶಾನ, ರೈತರ ಜಾಗಗಳು ಕಾಣೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ಮಾಲೀನ್ಯವಾಗಿ ಕೆರೆಯ ನೀರು ಕಂದಾಯ ಭೂಮಿಗೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಉಮಾ ಪರಶುರಾಮ್ ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಕರುನಾಡ ಗೋಪಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಮುರುಗೇಶ್, ಸಂಘದ ನಿರ್ದೇಶಕಿ ಇಂದಿರಮ್ಮ, ಸಂಘದ ಸಹಕಾರ್ಯದರ್ಶಿ ಅಶ್ವಿನ್, ಸ್ವರೂಪ್, ಸುಬ್ರಮಣಿ, ಉಪಾಧ್ಯಕ್ಷ ರಾಜಗೋಪಾಲ್, ಸತೀಶ್ ಬಾಬು, ವೆಂಕಟಸ್ವಾಮಿರೆಡ್ಡಿ, ಕೃಷ್ಣಾರೆಡ್ಡಿ, ಹರೀಶ್, ಪ್ರವೀಣ್, ಕೃಷ್ಣಮೂರ್ತಿ, ರಮೇಶ್, ಅಶೋಕ್, ವೆಂಕಟೇಶ್ ಇದ್ದರು.

ಗೂಗುಲ್ ಪೇ ಪೋನ್ ಪೇ ಮಾಡಿದರೆ ಕೆಲಸ ಸಲೀಸು

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಯಾರು ಸಹ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ತಾಲ್ಲೂಕು ಕಚೇರಿಯ ಕೆಲ ಅಧಿಕಾರಿಗಳಿಗೆ ಗೂಗಲ್ ಪೇ ಫೋನ್ ಪೇ ಮಾಡಿದರೆ ಮಾತ್ರ ಕೆಲಸಗಳು ಆಗುತ್ತವೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಉಮಾ ಪರಶುರಾಮ್ ಆರೋಪಿಸಿದರು. ಇಲ್ಲದಿದ್ದರೆ ನೂರೊಂದು ವಿಘ್ನಗಳು ಬರುತ್ತವೆ. ಅಧಿಕಾರಿಗಳು ಬಂಡವಾಳಶಾಯಿಗಳ ಪರವಾಗಿದ್ದಾರೆ ರೈತರು ಬಡವರು ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ತಾಲ್ಲೂಕಿನ ಜನತೆ ಧ್ವನಿ ಎತ್ತಬೇಕು. ರೈತರು ಬಡವರ ಕೆಲಸಗಳಿಗೆ ಹಣ ಕೇಳುವ ಅಧಿಕಾರಿಗಳಿಗೆ ಕರ್ಮವೇ ಉತ್ತರ ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.