ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ 250 ದಿನ ಪೂರೈಸಿದ್ದು, ಅಹೋರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಪ್ರಗತಿಪರ ರೈತ ಮಹಿಳೆಯರು ಮಹಿಳಾ ದಿನ ಆಚರಿಸಿದರು.

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಹಾಗೇಯೇ ಕೃಷಿ ಚಟುವಟಿಕೆಯಲ್ಲಿಯೂ ಮಹಿಳೆಯರು ತೊಡಗಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ಯಶಸ್ವಿ ರೈತನ ಹಿಂದೆ ಮಹಿಳೆಯ ಪಾತ್ರವಿರುತ್ತದೆ. ಸರ್ಜಾಪುರದ ಕೃಷಿ ಭೂಮಿಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ರೈತರ ಭೂಮಿಯನ್ನು ಕಿತ್ತು ಉದ್ಯಮಿಗಳಿಗೆ ನೀಡುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ರೈತ ಮಹಿಳೆ ತ್ರಿವೇಣಿ ಗಾಂಧಿ ಹೇಳಿದರು.

ಅಧಿಕಾರಿಗಳು ಸಹ ಕೃಷಿ ಭೂಮಿಯನ್ನು ಬರಡು ಭೂಮಿ ಎಂದು ವರದಿ ನೀಡಿದ್ದಾರೆ. ಅಧಿಕಾರಿಗಳು ಸರ್ಜಾಪುರ ಹೋಬಳಿಯ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಕೃಷಿ ಭೂಮಿಯನ್ನು ಪರಿಶೀಲಿಸಬೇಕು. ಎಸಿ ಕೊಠಡಿಗಳು ಕೂತು ಕೃಷಿ ಭೂಮಿಯನ್ನು ಬರಡು ಭೂಮಿ ಎನ್ನುವುದು ಸುಲಭ. ಆದರೆ ಕೃಷಿ ಮಾಡಿ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.

ಮುಖಂಡರಾದ ಪುಷ್ಪ.ವಿ.ಸೋಮಶೇಖರರೆಡ್ಡಿ, ಲಕ್ಷ್ಮೀ ಪ್ರಸನ್ನ, ಉಮಾ ಪರಶುರಾಮ್, ಉಮಾ, ಸರಿತಾ, ಸಮನಹಳ್ಳಿ ವಸಂತ, ಕಲಾ, ಸಿಂಧು, ಕಲಾ, ಮಮತಾ, ಶಶಿಕಲಾ, ಚಂದ್ರಮ್ಮ, ಗೌರಮ್ಮ, ಸಿ.ಕಲಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.