ಆನೇಕಲ್: ತಾಲ್ಲೂಕಿನ ಗೆರಟಿಗನಬೆಲೆಯಲ್ಲಿ 80 ವರ್ಷಗಳ ನಂತರ ಊರಹಬ್ಬ ನಡೆಯುತ್ತಿದೆ. ಉತ್ತಮ ಕರಗದಮ್ಮ ದೇವಿ ಮತ್ತು ಬಲಗೈ ಕರಗದಮ್ಮ ದೇವಿಯ ಕರಗ ಮಹೋತ್ಸವ ಮತ್ತು ಊರಹಬ್ಬವು ಮೇ 25ರಂದು ರಾತ್ರಿ ನಡೆಯಲಿದೆ.

ಜಾತ್ರೆ ಪ್ರಯುಕ್ತ ಮೇ 18ರಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಿಳೆಯರು ಅಲಂಕೃತ ಬೆಲ್ಲದಾರತಿಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವರಿಗೆ ಅರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಭಾನುವಾರ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು.

ಮೇ 25ರ ಸಂಜೆ 7.30ಕ್ಕೆ ಕರಗದಮ್ಮ ದೇವಿಗೆ ದೀಪೋತ್ಸವ ಮತ್ತು ರಾತ್ರಿ 12.30ಕ್ಕೆ ಕರಗದಮ್ಮ ದೇವಿ ಕರಗ ಮಹೋತ್ಸವ ನಡೆಯಲಿದೆ.

ಮೂರು ಕರಗಗಳು ಗೆರಟಿಗನೆಬೆಲೆಯ ವಿಶೇಷ: ಗೆರಟಿಗನಬೆಲೆ ಗ್ರಾಮದಲ್ಲಿನ ಉತ್ತಮ ಕರಗದಮ್ಮ ಮತ್ತು ಬಲಗೈ ಕರಗದಮ್ಮ ದೇವಿಯ ಕರಗ ಮಹೋತ್ಸವದಲ್ಲಿ ಮೂರು ಕರಗ ಮೆರವಣಿಗೆ ನಡೆಯುವುದ ವಿಶೇಷ. ಬಿ.ಮಂಜುನಾಥ್, ಬಿ.ಅರುಣ್ ಕುಮಾರ್ ಮತ್ತು ವೆಂಕಟಸ್ವಾಮಿ ಅವರು ಕರಗಗಳನ್ನು ಹೊರಲಿದ್ದಾರೆ. ಸೋಮವಾರ ರಾತ್ರಿ 12.30ಕ್ಕೆ ಕರಗ ಮಹೋತ್ಸವ ವೈಭವದಿಂದ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-15-1615430658

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.