ಆನೇಕಲ್: ತಾಲ್ಲೂಕಿನ ಹೆನ್ನಾಗರದ ದ್ರೌಪದಾದೇವಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಭಾನುವಾರ ಬೆಳಗಿನ ಜಾನ 3ರ ವೇಳೆಗೆ ಹೆನ್ನಾಗರದ ಧರ್ಮರಾಯಸ್ವಾಮಿ ದೇವಾಲಯದಿಂದ ಕರಗವನ್ನು ಹೊತ್ತು ಪೂಜಾರಿ ಮಂಜುನಾಥ್ ಅವರು ಹೊರಬರುತ್ತಿದ್ದಂತೆ ವೀರಕುಮಾರರು.. ಡಿಕ್ ಡೀ, ಗೋವಿಂದ... ಗೋವಿಂದ.. ಎಂಬ ಘೋಷಣೆಗಳೊಂದಿಗೆ ಕರಗವನ್ನು ಬರಮಾಡಿಕೊಂಡರು. ವೀರಕುಮಾರರು ಕತ್ತಿಗಳಿಂದ ಅಲಗು ಸೇವೆ ಮಾಡಿ ಕರಗಕ್ಕೆ ಭಕ್ತಿ ಸಮರ್ಪಿಸಿದರು.

ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದ ನಂತರ ಕರಗವು ಹೊರ ಬಂದಿತು. ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ಕರಗವನ್ನು ಕಣ್ತುಂಬಿಕೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗವು ಸಂಚರಿಸಿತು. ಪ್ರಮುಖ ಸ್ಥಳಗಳಲ್ಲಿ ಹೂವಿನ ರಂಗೋಲಿಯಿಂದ ಅಲಂಕರಿಸಲಾಗಿತ್ತು. ಕರಗ ಆಗಮಿಸುತ್ತಿದ್ದಂತೆ ಮಲ್ಲಿಗೆ ಹೂವುಗಳನ್ನು ಅರ್ಪಿಸುವ ಮೂಲಕ ಜನರು ತಮ್ಮ ಭಕ್ತಿ ಸಮರ್ಪಿಸಿದರು.

ಕರಗವು ನಾದಸ್ವರದ ಮತ್ತು ಡೋಲು ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಮುಂದೆ ಸಾಗುತ್ತಿದ್ದರೆ ಜನಜಂಗುಳಿ ಕರಗದೊಂದಿಗೆ ಹೆಜ್ಜೆಹಾಕಿದರು.

ಗ್ರಾಮದ 30ಕ್ಕೂ ಹೆಚ್ಚು ಗ್ರಾಮದೇವತೆ ಪಲ್ಲಕ್ಕಿ ಉತ್ಸವ ನಡೆಯಿತು. ಮಲ್ಲಿಗೆ ಹೂವುಗಳಿಂದ ಅಲಂಕೃತಗೊಂಡಿದ್ದ ಪಲ್ಲಕ್ಕಿಗಳು ಗಮನ ಸೆಳೆದವು. ಕರಗವು ಮನೆಗಳ ಬಳಿ ಬರುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿದರು. ಮನೆಗಳ ಬಳಿ ಹೂವುಗಳಿಂದ ಆಕರ್ಷಕ ರಂಗೋಲಿ ಹಾಕಿ ಕರಗವನ್ನು ಸ್ವಾಗತಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-15-1214799915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.