ಆನೇಕಲ್: ಪಟ್ಟಣದ ಆನೇಕಲ್-ಹೊಸೂರು ಮುಖ್ಯ ರಸ್ತೆ ಅವೈಜ್ಞಾನಿಕ ವಿಭಜಕ ಅಪಾಯ ಆಹ್ವಾನಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ವಿಭಜಕ ಕಾಣದ ಕಾರಣ ಅಪಘಾತ ಸಂಭವಿಸುತ್ತಿದೆ. ಇದೇ ಸ್ಥಳದಲ್ಲಿ ಎರಡು ದಿನದ ಹಿಂದೆ ವ್ಯಕ್ತಿಯೊಬ್ಬರ ಪ್ರಾಣ ಕಳೆದುಕೊಂಡಿದ್ದಾರೆ.

ಆನೇಕಲ್-ಹೊಸೂರು ಮುಖ್ಯ ರಸ್ತೆಯಾಗಿದ್ದು ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಇಲ್ಲಿ ಸಂಚರಿಸುತ್ತವೆ. ತಮಿಳುನಾಡಿಗೆ ಸಂಪರ್ಕ ರಸ್ತೆಯಾಗಿರುವುದರಿಂದ ದಿನದ 24 ಗಂಟೆಯೂ ವಾಹನ ಸಂಚಾರದಿಂದ ಕೂಡಿರುತ್ತದೆ.

ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿಸಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಅಂದಾಜು ಎರಡು ಕಿ.ಮೀ ವರೆಗೆ ರಸ್ತೆ ವಿಭಜಕ ಇದ್ದರೂ, ಯಾವುದೇ ಸೂಚನೆ ಫಲಕ ಹಾಗೂ ರೆಡಿಯಂ ಅಳವಡಿಸದ ಕಾರಣ ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿದೆ.

ಇಲ್ಲಿ ನಡೆಯುವ ಅಪಘಾತಗಳ ಬಗ್ಗೆ ಪ್ರಕರಣ ದಾಖಲಾಗದ ಕಾರಣ ಪೊಲೀಸ್ ಠಾಣೆಯಲ್ಲಿ ಸ್ಪಷ್ಟ ಅಂಕಿ ಅಂಶ ಇಲ್ಲ. ಸಾರ್ವಜನಿಕರು ಹೇಳುವಂತೆ, ಕಳೆದ ಮೂರು ತಿಂಗಳಿನಲ್ಲಿ 20ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಅಂದಾಜು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅವೈಜ್ಞಾನಿಕ ವಿಭಜಕಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಆದರೂ ಸಂಬಂಧಿಸಿ ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ವಿಭಜಕಗಳು ರಸ್ತೆಯ ಎರಡು ಬದಿಗಳಲ್ಲಿ ಸಂಚರಿಸುವವರಿಗೆ ಕಾಣಿಸುವಂತಿರಬೇಕು. ಆದರೆ ಈ ಮುಖ್ಯ ರಸ್ತೆಯಲ್ಲಿ ಸಂಚರಿಸುವವರೆಗೆ ವಿಭಜಕ ಕಾಣುವುದಿಲ್ಲ. ರಸ್ತೆಯ ಎರಡು ಕಿ.ಮೀ. ಅಂತರದಲ್ಲಿ ಹಾಕಲಾಗಿದ್ದ ವಿಭಜಕದವನ್ನು ಕಿತ್ತು ಅಂಗಡಿ, ಹೋಟೆಲ್, ಶಾಲೆ, ಮನೆಗಳಿಗೆ ದಾರಿ ಮಾಡಲಾಗಿದೆ. ಈ ಪ್ರಮಾದ 25–30 ಕಡೆ ಆಗಿದೆ. ಇಲ್ಲಿ ಬೈಕ್ಗಳು ರಸ್ತೆ ಕ್ರಾಸ್ ಮಾಡುವಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ವಾಹನ ಸವಾರರು.

ಅವೈಜ್ಞಾನಿಕ ರಸ್ತೆ ವಿಭಜಕದಿಂದ ಪ್ರಾಣವೇ ಹೊದರೂ ಅಧಿಕಾರಿಗಳು ನಿದ್ದೆಯಿಂದ ಎದ್ದಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕ ವಿಭಜಕಗಳಿಗೆ ಮುಕ್ತಿ ನೀಡಬೇಕು. ಅವಶ್ಯಕತೆ ಇರುವೆಡೆ ಮಾತ್ರ ವಿಭಜಕ ನಿರ್ಮಿಸಬೇಕು. ರಸ್ತೆ ವಿಭಜಕಗಳಿಗೆ ರೇಡಿಯಂ ಅಳವಡಿಸಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-15-943276365

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.