ಭಾನುವಾರ, 7 ಜೂನ್ 2026
×
ADVERTISEMENT

ಪರಿಸರ ಸೂಕ್ಷ್ಮ ವಲಯದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ?: ಪರಿಸರವಾದಿಗಳ ವಿರೋಧ

ವನ್ಯಜೀವಿಗಳ ಆವಸ್ಥಾನಕ್ಕೆ ಧಕ್ಕೆ l ಆನೆ ಕಾರಿಡಾರ್‌ನಲ್ಲಿ ಕಾಮಗಾರಿಗೆ ಪರಿಸರವಾದಿಗಳ ವಿರೋಧ
ಮಹೇಶ ಕುಮಾರ್‌. ಎಸ್‌
Published : 22 ಮೇ 2026, 0:15 IST
Last Updated : 22 ಮೇ 2026, 0:15 IST
ADVERTISEMENT
ಫಾಲೋ ಮಾಡಿ
Comments
ಕ್ರೀಡಾಂಗಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ವನ್ಯಜೀವಗಳು ಆಸನ ವ್ಯವಸ್ಥೆ ಮಾಡಿ ಎಂದು ಎಐ ಫೋಟೋ ಸಹಿತ ವ್ಯಂಗವಾಡಿದ್ದಾರೆ
ಕ್ರೀಡಾಂಗಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ವನ್ಯಜೀವಗಳು ಆಸನ ವ್ಯವಸ್ಥೆ ಮಾಡಿ ಎಂದು ಎಐ ಫೋಟೋ ಸಹಿತ ವ್ಯಂಗವಾಡಿದ್ದಾರೆ
ಕ್ರೀಡಾಂಗಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌
ಕ್ರೀಡಾಂಗಣ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌
ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿದ ಹೊಸ ಕಾನೂನುನಿಯಮ ಜಾರಿಯಾದರೆ ಆನೇಕಲ್‌ ಪಟ್ಟಣ ವ್ಯಾಪ್ತಿಯವರೆಗೂ ಅನ್ವಯಿಸುತ್ತವೆ. ಇನ್ನೂ ನಿಖರ ನಿಯಮಗಳು ರೂಪುಗೊಂಡಿಲ್ಲ. ಇನ್ನೂ ಹೊಸ ಪರಿಸರ ಕಾನೂನು ಜಾರಿಗೆ ಬಾರದಿರುವುದರಿಂದ ಸದ್ಯಕ್ಕೆ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪರಿಸರ ಸೂಕ್ಷ್ಮ ವಲಯದ ಹೊಸ ನಿಯಮಗಳನ್ನು ಅನುಸರಿಸಿದರೆ ಆನೇಕಲ್‌ ಪಟ್ಟಣದಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಮಾಡಲಾಗುವುದಿಲ್ಲ. ಕ್ರೀಡಾಂಗಣ ನಿರ್ಮಾಣವಾದರೆ ಹೊಸ ಉದ್ಯೋಗ ಸೃಷ್ಟಿಯಾಗುತ್ತವೆ. ಅಭಿವೃದ್ಧಿ ಸಹಿಸದ ಕೆಲವರು ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿದ್ದಾರೆ
ಎನ್.ಎಸ್.ಪದ್ಮನಾಭ, ಮಾಜಿ ಅಧ್ಯಕ್ಷ ಆನೇಕಲ್‌ ಪುರಸಭೆ 
ಪರಿಸರ ಸೂಕ್ಷ್ಮ ವಲಯಕ್ಕೆ ಬರಲ್ಲ ಅಂತರರಾಷ್ಟ್ರೀಯ ಕ್ರೀಡಾಂಗಣ ಆನೇಕಲ್‌ ತಾಲ್ಲೂಕಿನ ಅಸ್ಮಿತೆಯಾಗಿದೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರೀಡಾಂಗಣ ಪೂರಕವಾಗಲಿದೆ. ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಲ್ಲಿ ಕ್ರೀಡಾಂಗಣ ಬರುವುದಿಲ್ಲ. ಸಾರ್ವಜನಿಕರಿಗೆ ಅವಶ್ಯಕವಿರುವ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿಯೇ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ
ಬಿ.ಶಿವಣ್ಣ ,ಶಾಸಕ
ಅರಣ್ಯ ಇಲಾಖೆ ಎನ್‌ಒಸಿ ಈಡಲಿ...
ಅರಣ್ಯ ಪ್ರದೇಶದಲ್ಲಿ ಯಾವುದೇ ಬೃಹತ್‌ ಯೋಜನೆ ಆರಂಭವಾಗಬೇಕಾದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಪರಿಸರ ಸಚಿವಾಲಯದ ಕಟ್ಟುನಿಟ್ಟಿನ ಅನುಮತಿ ಅಗತ್ಯ. ಆನೆ ಕಾರಿಡಾರ್‌, ಪರಿಸರ ಸೂಕ್ಷ್ಮ ವಲಯವು ಸಮೀಪದಲ್ಲಿರುವುದರ ನಡುವೆ ಅನುಮತಿಗಳು ಮತ್ತು ನಿರಪೇಕ್ಷಣಾ ಪತ್ರವನ್ನು ಸಂಬಂಧಿಸಿದ ಅಧಿಕಾರಿಗಳು ಬಿಡುಗಡೆ ಮಾಡಬೇಕು ಎಂದು ಸ್ಥಳೀಯ ಬಿ.ಬಾಬು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT