ಇಂಡ್ಲವಾಡಿ ರಸ್ತೆಯಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿರುವುದು
ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಸಣ್ಣಪುಟ್ಟ ಅನಾಹುತವಾಗಿದೆ. ಮುಖ್ಯ ವೇದಿಕೆಗೆ ಯಾವುದೇ ಹಾನಿಯಾಗಿಲ್ಲ. ಊಟದ ವ್ಯವಸ್ಥೆಗೆ ಹಾಕಲಾಗಿದ್ದ ಟೆಂಟ್‌ಗೆ ನೀರು ಬಂದಿದೆ. ಶನಿವಾರ ನಿಗದಿಯಾದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ
– ಜಮೀರ್ ಅಹಮ್ಮದ್ ಖಾನ್, ವಸತಿ ಸಚಿವ
ಇ ಲಾಟರಿಗೆ ಮುಖ್ಯಮಂತ್ರಿ ಚಾಲನೆ
ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸೂರ್ಯಸಿಟಿ ನಾಲ್ಕನೇ ಹಂತದಲ್ಲಿನ ಬಡಾವಣೆ ನಿವೇಶನಗಳನ್ನು ಹಂಚಿಕೆ ಮಾಡಲು ಇ–ಲಾಟರಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಇಂಡ್ಲವಾಡಿ ಸುತ್ತಮುತ್ತ 1938 ಎಕರೆ ಜಮೀನಿನ ಪೈಕಿ 1200 ಎಕರೆ ಬಡಾವಣೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಶನಿವಾರ ಮುಖ್ಯಮಂತ್ರಿ ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಿದ್ದಾರೆ.