ಜಿಗಣಿ(ಆನೇಕಲ್): ಒಂದು ಕಾಲದಲ್ಲಿ ಜನ–ಜಾನುವಾರುಗಳಿಗೆ ಜೀವಜಲವಾಗಿದ್ದ ಜಿಗಣಿಯ ಗಂಗರ ಕಾಲದ ಜೀವನಾಡಿ ನಗರೀಕರಣಕ್ಕೆ ಬಲಿಯಾಗಿ ಅವಸಾನದತ್ತ ಮುಖ ಮಾಡಿದೆ. ನಿರ್ಲಕ್ಷ್ಯ, ನಗರೀಕರಣ ಫಲ, ಪ್ಲಾಸ್ಟಿಕ್, ತ್ಯಾಜ್ಯ ಮತ್ತು ಕೊಳಚೆ ನೀರು ಕೆರೆ ಪ್ರಾಣಕ್ಕೆ ಕುತ್ತು ತಂದಿದೆ.

ಕೆರೆ ನಿರ್ವಹಣೆಗೆ ಸಂಬಂಧ ಆಡಳಿತಗಳ ಸಂಪೂರ್ಣ ನಿರ್ಲಕ್ಷ್ಯ, ರಾಜಕಾಲುವೆಗೆ ಚರಂಡಿ ಸಂಪರ್ಕಿಸಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಕಲುಷಿತ ನೀರು ಕೆರೆ ಒಡಲ ಸೇರುತ್ತಿದೆ. ಕೆರೆಯ ಏರಿಯ ಸುತ್ತ ಕಸ ವಿಲೇವಾರಿ, ಗ್ರಾನೈಟ್ ಕೈಗಾರಿಕೆಗಳು ತ್ಯಾಜ್ಯವನ್ನೂ ಕೆರೆ ಆವರಣದಲ್ಲೇ ಸುರಿಯಲಾಗುತ್ತಿದೆ. ಇದರಿಂದ ಜಿಗಣಿ ಕೆರೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ತಾಲ್ಲೂಕಿನ ದೊಡ್ಡಕೆರೆಗಳಲ್ಲಿ ಒಂದಾದ ಜಿಗಣಿ ಕೆರೆ ಸುಮಾರು 260ಎಕರೆ ವಿಸ್ತಿರ್ಣ ಹೊಂದಿದೆ. ಜಿಗಣಿ, ಕೊಪ್ಪ, ಹರಪನಹಳ್ಳಿ, ಬಂಡೆನಲ್ಲಸಂದ್ರ, ಹುಲಿಮಂಗಲ ಗ್ರಾಮಗಳಿಗೆ ಹೊಂದಿಕೊಂಡಿದೆ. ಜಿಗಣಿ ಕೆರೆಯು ಸದಾ ತುಂಬಿರುತ್ತದೆ. ಆದರೆ ಇಲ್ಲಿರುವುದು ಸ್ವಚ್ಛ ನೀರಲ್ಲ. ಬದಲಿಗೆ ಕಲುಷಿತವಾದ ತ್ಯಾಜ್ಯದ ನೀರು. ಇದರಿಂದಾಗಿ ಕೆರೆಯ ನೀರು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ. ಹಾಗೇ ಅಂತರ್ಜಲವು ಕಲುಷಿತಗೊಳ್ಳುತ್ತಿದೆ.

ಕೆರೆಯನ್ನು ಶೇ 80ಕ್ಕಿಂತ ಹೆಚ್ಚು ಕಲುಷಿತ ನೀರು ಆವರಿಸಿಕೊಂಡಿದೆ. ಇದರೊಂದಿಗ ತ್ಯಾಜ್ಯ ಬೆರತು ನೀರು ಕಪ್ಪು ಬಣ್ಣಕ್ಕೆ ತಿರುಗಿ ಗಬ್ಬುನಾರುತ್ತಿದೆ. ಕೆರೆ ಪಕ್ಕದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಕೆರೆ ನೀರನ್ನು ಜನ ಕುಡಿಯುತ್ತಿದ್ದರೂ, ಈಗ ಇದರ ಸಮೀಪ ಹೋಗಲು ಭಯ ಪಡುತ್ತಿದ್ದಾರೆ.

ಕೆರೆ ನೀರು ಕಲುಷಿತವಾಗಲು ಪುರಸಭೆ ಬಹುದೊಡ್ಡ ಕೊಡುಗೆ ನೀಡಿದೆ. ಒಳಚರಂಡಿಯ ನೀರು ಸಂಸ್ಕರಿಸದೆ ಕೆರೆ ಹರಿಸುತ್ತಿರುವುದರಿಂದ ಕೆರೆ ದುರ್ನಾತ ಬೀರುತ್ತಿದೆ.

ಕಟ್ಟಡ ತ್ಯಾಜ್ಯ(ಡೆಬ್ರೀಸ್), ಅಂಗಡಿಗಳ ತ್ಯಾಜ್ಯ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯವನ್ನು ಕೆರೆಯ ಆವರಣದಲ್ಲಿಯೇ ಎಸೆಯಲಾಗುತ್ತಿದೆ. ಅಲ್ಲದೆ ಈ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಕೆರೆ ವಾತಾವರಣವೇ ಕಲುಷಿತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-15-1885532332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.