ಆನೇಕಲ್: ಪಟ್ಟಣದ ಸಂತೆ ಬೀದಿಯ ಧರ್ಮರಾಯ ದ್ರೌಪದಮ್ಮ ಕರಗ ಮಹೋತ್ಸವ ಏ. 1ರಂದು ನಡೆಯಲಿದ್ದು ಆನೇಕಲ್ ಪಟ್ಟಣ ನವವಧುವಿನಂತೆ ಸಜ್ಜಾಗಿದೆ.

ಕರಗ ಶಕ್ತ್ಯೋತ್ಸವದ ಪ್ರಯುಕ್ತ ಧರ್ಮರಾಯ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆಸಲಾಯಿತು. ಕರಗ ಹೊರುವ ಎ.ರಮೇಶ್ ಧಾರ್ಮಿಕ ಪೂಜೆ ಸಲ್ಲಿಸಿದರು.

ಮಾರ್ಚ್ 30ರ ರಾತ್ರಿ ದೀಪೋತ್ಸವ ಆಯೋಜಿಸಲಾಗಿತ್ತು. ಮಹಿಳೆಯರು ಬೆಲ್ಲದಾರತಿ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಡೋಲಿನ ನಾದಕ್ಕೆ ತಕ್ಕಂತೆ ಮಹಿಳೆಯರು ನೃತ್ಯ ಮಾಡಿ ಸಂಭ್ರಮಿಸಿದರು. ದೇವಾಲಯದ ಆವರಣದಲ್ಲಿ ವಿವಿಧ ಪೂಜೆ ಮಾಡಲಾಯಿತು.

ಏಪ್ರಿಲ್ 1ರ ಬುಧವಾರ ಮಧ್ಯರಾತ್ರಿ 2.45ರ ಸುಮಾರಿಗೆ ಕರಗ ಹೊತ್ತ ರಮೇಶ್ ದೇವಾಲಯದಿಂದ ಹೊರಟು ಶಂಕರಮಠ, ಸಂತೆ ಬೀದಿ, ತಿಲಕ್ ಸರ್ಕಲ್, ಥಳೀ ರಸ್ತೆ ಆಂಜನೇಯ ದೇವಾಲಯ, ಬೇಡರ ಬೀದಿ, ಪಾಳೇಗಾರರ ಬೀದಿ, ದೊಡ್ಡಕೆರೆ ಬ್ರಾಹ್ಮಣರ ಬೀದಿ, ಉಳ್ಳಿ ತಿಗಳರ ಪೇಟೆ, ಎಕೆ ಕಾಲೋನಿ ಗಂಗಮ್ಮ ದೇವಾಲಯ, ತ್ಯಾಗರಾಜ ರಸ್ತೆ, ದೊಡ್ಡ ಬೀದಿ, ದೇವರಕೊಂಡಪ್ಪ ವೃತ್ತ, ಗಾಂಧೀ ವೃತ್ತದ ಮೂಲಕ ಸಾಗಿ ದೇವಾಲಯ ತಲುಪಲಿದೆ.

ಕರಗ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ, ದೀಪೋತ್ಸವ, ಧರ್ಮರಾಯ ದ್ರೌಪದಮ್ಮ ಕಲ್ಯಾಣೋತ್ಸವ ನಡೆಯಿತು. ಏ. 1ರ ಮಧ್ಯರಾತ್ರಿ ಹಸಿಕರಗ, ಏ.2ಕ್ಕೆ ರಥೋತ್ಸವ, ಸಂಜೆ ಕೋಟೆ ಜಗಳ, ಏ. 4ರಂದು ಒಣಕರಗ, ಇರಾವತನ ಶಿರಚ್ಛೇದನ ಮತ್ತು ಅಗ್ನಿಕೊಂಡ ಮಹೋತ್ಸವ ನಡೆಯಲಿದೆ ಎಂದು ಆಚರಣಾ ಸಮಿತಿಯ ಪಿ.ಮಂಜುನಾಥ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-15-707193425

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.