ಆನೇಕಲ್: ತಾಲ್ಲೂಕಿನ ಬಿದರಗೆರೆ ಓಣಿ ಹಾಗೂ ಮುತ್ತುಗಟ್ಟಿ ರಸ್ತೆಯಲ್ಲಿರುವ ಕುರುಬರಹಟ್ಟಿ ಮುನೇಶ್ವರಸ್ವಾಮಿ ದೇವಾಲಯದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸಂಭ್ರಮದಿಂದ ನೆರವೇರಿತು.

ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ 2ರ ಸುಮಾರಿಗೆ ಅಲಂಕೃತ ರಥದಲ್ಲಿ ಮುನೇಶ್ವರ ಸ್ವಾಮಿಯನ್ನು ಕುಳ್ಳರಿಸಿ ದೇವಾಲಯದ ಸುತ್ತಲೂ ಭಕ್ತರು ರಥ ಎಳೆದರು.

ಜಾತ್ರೆ ಮಹೋತ್ಸವ ಪ್ರಯುಕ್ತ ಮುನೇಶ್ವರಸ್ವಾಮಿ, ತಿಮ್ಮರಾಯಸ್ವಾಮಿ, ಆಂಜನೇಯಸ್ವಾಮಿ, ಯಲ್ಲಮ್ಮ ದೇವಿ, ಮಾರಮ್ಮ ದೇವಿ ಸೇರಿದಂತೆ ವಿವಿಧ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು.

ಜಾತ್ರೆಯಲ್ಲಿ ರಾಧಾಕೃಷ್ಣ ಕೋಲಾಟ ಮಂಡಳಿ, ಜೈ ಮಾರುತಿ ಕೋಲಾಟ ಮಂಡಳಿ ಹಾಗೂ ಮದ್ದುರಮ್ಮ ಕೋಲಾಟ ಮಂಡಳಿಗಳಿಂದ ಮಹಿಳೆಯರು ಆಕರ್ಷಕ ಕೋಲಾಟ ಪ್ರದರ್ಶನ ನೀಡಿದರು. ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.

ಮುಖಂಡರಾದ ಟಿ.ವಿ ಬಾಬು, ಸಿ.ಮುನಿರಾಜು, ಗೆರಟಿಗನ ಬೆಲೆ ರಾಮಕೃಷ್ಣ, ಎಚ್.ಎಂ.ತಿಮ್ಮರಾಜು, ದೇವಸ್ಥಾನದ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾದ ಎಂ.ಎಲ್.ನಾರಾಯಣ, ಅಧ್ಯಕ್ಷರಾದ ಟಿ.ನಂಜಪ್ಪ, ಖಜಾಂಚಿ ವಾಸ್ತು ಶ್ರೀಧರ್, ಕಾರ್ಯದರ್ಶಿ ಸಿ.ಚಿನ್ನಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-15-1134859987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.