ಆನೇಕಲ್ : ತಿಗಳರ ಬೀದಿಯ ಪಾರ್ಥಸಾರಥಿ ಭಜನೆ ಮನೆ ದ್ರೌಪತಮ್ಮ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಸಂತೆ ಬೀದಿಯ ದೇವಾಲಯದಲ್ಲಿ ಭಾನುವಾರ ಭಕ್ತರು ‘ಪೊಂಗಲ್ ಸೇವೆ’ಯಲ್ಲಿ ಪಾಲ್ಗೊಂಡು ಪ್ರಸಾದ ಹಂಚುವ ಮೂಲಕ ಭಕ್ತಿ ಸಮರ್ಪಿಸಿದರು.

ಕರಗ ಮಹೋತ್ಸವದಲ್ಲಿ ಹಲವಾರು ಧಾರ್ಮಿಕ ಆಚರಣೆ ನಡೆಸಲಾಗುತ್ತದೆ. ವಹ್ನಿಕುಲ ಕುಟುಂಬಗಳು ದೇವಾಲಯದ ಸುತ್ತಲೂ ಇಟ್ಟಿಗೆ ಒಲೆ ಇಟ್ಟು ಪೊಂಗಲ್ ಸಿದ್ದಪಡಿಸಿ ಸ್ವಾಮಿಗೆ ನೈವೇದ್ಯ ಮಾಡಿ ಭಕ್ತರಿಗೆ ಹಂಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಒಣಕರಗದ ದಿನದಂದು ಸಂಜೆ 5ರ ವೇಳೆಗೆ ನೂರಾರು ಮಹಿಳೆಯರು ಪೊಂಗಲ್ ಸಿದ್ದಪಡಿಸಲು ದೇವಾಲಯದ ಆವರಣದಲ್ಲಿ ಜಮಾವಣೆಗೊಂಡಿದ್ದರು. ಪ್ರತಿ ಕುಟುಂಬದವರು ಸಿದ್ದಪಡಿಸಿದ ಪೊಂಗಲ್ನ್ನು ಒಗ್ಗೂಡಿಸಿ ಪ್ರಸಾದವೆಂದು ಎಲ್ಲರಿಗೂ ಹಂಚಲಾಯಿತು.

ಭಜನೆಮನೆಯ ಸುತ್ತಲೂ 50-60ಕ್ಕೂ ಹೆಚ್ಚು ಒಲೆಗಳನ್ನು ಇಟ್ಟು ಏಕಕಾಲದಲ್ಲಿ ಸಿಹಿ ಪೊಂಗಲ್ ಸಿದ್ದಪಡಿಸಿ ಭಕ್ತರಿಗೆ ಹಂಚಿದ ದೃಶ್ಯ ಗಮನ ಸೆಳೆಯಿತು.

ಕರಗ ಆಚರಣೆಯ ಪ್ರಯುಕ್ತ ಕಳೆದ ಏಳು ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೃಷ್ಣ, ಧರ್ಮರಾಯ ದ್ರೌಪದಮ್ಮ ದೇವಿ ಸೇರಿದಂತೆ ಪಾಂಡವರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-15-378819559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.