ಆನೇಕಲ್: ತಾಲ್ಲೂಕಿನ ಕರ್ಪೂರು ಬಳಿ ಭಾನುವಾರ ಅಪಹರಣವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಡೆಂಕಣಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಗೆ ಸುಪಾರಿ ನೀಡಿದ್ದ ಆರೋಪಿಯನ್ನು ಆನೇಕಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಹೊನ್ನಕಲಶಾಪುರದ ರಿಯಲ್ ಎಸ್ಟೇಟ್ ಉದ್ಯಮಿ ಗೋಪಿ (38) ಅವರನ್ನು ಭಾನುವಾರ ಸಂಜೆ 5ರ ಹೊತ್ತಿಗೆ ಅಪಹರಿಸಲಾಗಿತ್ತು.

ಅತ್ತಿಬೆಲೆಯಿಂದ ಆನೇಕಲ್ನತ್ತ ಬರುತ್ತಿದ್ದ ಗೋಪಿ ಮುಖಕ್ಕೆ ಸ್ಪ್ರೇ ಹಾಕಿ ಅಪಹರಿಸಿ ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಎಸೆಯಲಾಗಿದೆ. ಭಾನುವಾರ ರಾತ್ರಿಯೇ ಶವಪತ್ತೆಯಾಗಿತ್ತು. ಆದರೆ ಗುರುತು ಪತ್ತೆಯಾಗಿರಲಿಲ್ಲ.

ಡೆಂಕಣಿಕೋಟೆ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಗೋಪಿ ಶವವನ್ನ ಪತ್ತೆ ಹಚ್ಚಲಾಯಿತು ಎಂದು ತಿಳಿಸಿದ್ದಾರೆ. ಗೋಪಿ ಕೊಲೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಅದೇ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್ ಬಾಬು ಎಂಬಾತನನ್ನು ಬಂಧಿಸಲಾಗಿದೆ.

ಘಟನೆ ನಾಲ್ಕೈದು ತಾಸಿನಲ್ಲಿಯೇ ಕೊಲೆಯ ಪ್ರಮುಖ ಆರೋಪಿ ಮೋಹನ್ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಏಳು ತಂಡ ರಚಿಸಲಾಗಿದೆ. ಆರೋಪಿಗಳು ಶಿವಮೊಗ್ಗದಲ್ಲಿರುವ ಬಗ್ಗೆ ಮಾಹಿತಿಗಳು ದೊರೆತಿವೆ. ಹಾಗಾಗಿ ಎರಡು ತಂಡಗಳು ಶಿವಮೊಗ್ಗಕ್ಕೆ ತೆರಳಿವೆ. ಇನ್ನು ಐದು ತಂಡಗಳು ಮೊಬೈಲ್ ಚಲನಚಲನ, ಕರೆ ಮಾಹಿತಿ ಸಂಗ್ರಹಿಸಲಾಗಿತ್ತು. ಆರೋಪಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್ ತಿಳಿಸಿದ್ದಾರೆ.

ಮೋಹನ್ ಬಾಬು ಬಳಿ ಭೂ ದಾಖಲೆ ಸಂಗ್ರಹಕಾರನಾಗಿ ಕೆಲಸ ಮಾಡುತ್ತಿದ್ದ ಗೋಪಿ ಕೆಲಸ ಬಿಟ್ಟು ಸ್ವಂತವಾಗಿ ಕೆಲಸ ಆರಂಭಿಸಿದ್ದ. ಇದರಿಂದ ತನ್ನ ವ್ಯಾಪಾರಕ್ಕೆ ಅಡ್ಡಿಯಾಗಿದ್ದು, ವಹಿವಾಟು ಕುಸಿದಿದೆ ಎಂದು ಅಸಮಾಧಾನಗೊಂಡಿದ್ದ ಮೋಹನ್ ಬಾಬು ಗೋಪಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪ್ರಾಥಮಿಕ ಮಾಹಿತಿ ದೊರೆಯುತ್ತಿದೆ. ತಲೆಮರೆಯಿಸಿಕೊಂಡಿರುವ ಆರೋಪಿಗಳ ಬಂಧನದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆಯೂ ಆನೇಕಲ್ ತಾಲ್ಲೂಕಿನ ಹುಸ್ಕೂರು ಸಮೀಪ ಗೋಪಿ ಅವರನ್ನು ಅಪಹರಿಸಿ ತಮಿಳುನಾಡಿಗೆ ಕರೆದೊಯ್ದು ಕೊಲೆ ಯತ್ನ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆ ಮುಂದೆ ಬೀಡುಬಿಟ್ಟು ಕುಟುಂಬ

ಭಾನುವಾರ ರಾತ್ರಿ ಪೂರ್ತಿ ಗೋಪಿ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಆನೇಕಲ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಕರೆಸಿ ಕೊಲೆಗೆ ಕಾರಣ ತಿಳಿಸುವ ವರೆಗೂ ಇಲ್ಲಿಂದ ಕದಲುವುದಿಲ್ಲವೆಂದು ಕುಟುಂಬಸ್ಥರು ಠಾಣೆ ಮುಂದೆಯೇ ಬೀಡು ಬಿಟ್ಟಿದ್ದಾರೆ. ಆನೇಕಲ್ ಪೊಲೀಸ್ ಠಾಣೆ ಮತ್ತು ಹೊನ್ನಕಲಶಾಪುರದಲ್ಲಿ ಉದ್ವಿಗ್ನಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿ ಮನೆಗೆ ಕಲ್ಲು ತೂರಾಟ ಯುವಕರು ಆರೋಪಿ ಮೋಹನ್ ಬಾಬು ಮನೆಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಹೊನ್ನಕಲಶಾಪುರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ವ್ಯಾಪ್ತಿಯ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಸಿಬ್ಬಂದಿ ಆನೇಕಲ್ನಲ್ಲಿದ್ದು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

10 ವರ್ಷದ ವೈಷಮ್ಯ

ಕೆಲ ವರ್ಷಗಳ ಹಿಂದೆ ಗೋಪಿ ಮೋಹನ್ ಬಾಬು ಅವರ ಬಳಿ ಕೆಲಸ ಬಿಟ್ಟು ಸ್ವಂತವಾಗಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದ. ಇದರಿಂದ ಮೋಹನ್ ಬಾಬು ಗ್ರಾಹಕರೆಲ್ಲ ಗೋಪಿಯತ್ತ ತಿರುಗಿದ್ದರು. ಇದರಿಂದ ಮೋಹನ್ ಬಾಬು ಅಸಮಾಧಾನಗೊಂಡಿದ್ದರು. ಇದರಿಂದ ಕಳೆದ 10 ವರ್ಷಗಳಿಂದಲೂ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಹಳೆಯ ವೈಷಮ್ಯದಿಂದ ಅಪರಿಚಿತರಿಗೆ ಸೂಚನೆ ನೀಡಿ ಕೊಲೆ ಮಾಡಿಸಿದ್ದಾನೆ ಎಂಬುದು ಗೋಪಿ ಅವರ ಸಂಬಂಧಿಕರ ಆರೋಪ.

ಆರೋಪಿ ಮನೆಗೆ ಕಲ್ಲು ತೂರಾಟ

ಯುವಕರು ಆರೋಪಿ ಮೋಹನ್ ಬಾಬು ಮನೆಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಹೊನ್ನಕಲಶಾಪುರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.