ಆನೇಕಲ್: ಎರಡು ವರ್ಷದಿಂದ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಲು ಪೋಷಕರು ನಿರಾಕರಿಸಿದ್ದರಿಂದ ನೊಂದ ಯುವಕನೊಬ್ಬ ಮದ್ಯದ ನಶೆಯಲ್ಲಿ ಇಂಡ್ಲವಾಡಿ ಸಮೀಪದ ಸಿದ್ದನಪಾಳ್ಯ ಬಳಿ ಬುಧವಾರ ಹೈಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಯುವಕನನ್ನು ರಕ್ಷಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ತಾಲ್ಲೂಕಿನ ಸಿದ್ದನಪಾಳ್ಯದ ನಿವಾಸಿ ಸೋಮಶೇಖರ್(23) ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸುವಂತೆ ಬುಧವಾರ ಬೆಳಗ್ಗೆ ಪೋಷಕರನ್ನು ಕೇಳಿದ್ದಾರೆ. ಆದರೆ ಪೋಷಕರು ಮೊದಲು ಕುಡಿತ ಬಿಡು ಎಂದು ಬುದ್ದಿ ಮಾತು ಹೇಳಿದ್ದಾರೆ.ಇದರಿಂದ ನೊಂದು ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದಕ್ಕೂ ಮೊದಲು ಮನೆಯ ಸಿಮೆಂಟ್ ಶೀಟ್ ಒಡೆದು ಮನೆಯಲ್ಲಿಯೇ ದಾಂಧಲೆ ನಡೆಸಿದ್ದ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಹೆದರಿಸಿದ್ದರು.

ಇದರಿಂದ ಸಿಟ್ಟಿಗೆದ್ದು ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ. ತಾನು ಪ್ರೀತಿಸುವ ಹುಡುಗಿ ಬಂದರೆ ಮಾತ್ರ ಕೆಳಗಡೆ ಇಳಿಯುವುದಾಗಿ ಹಟ ಹಿಡಿದ. ಪ್ರೀತಿಸಿದ ಹುಡುಗಿಯೂ ಮದುವೆಗೆ ನಿರಾಕರಿಸಿದ್ದಳು ಎನ್ನಲಾಗಿದೆ.

ಸ್ಥಳೀಯರು ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ನಾಲ್ಕು ತಾಸು ಯುವಕನ ಮನವೊಲಿಕೆ ಕಾರ್ಯದಲ್ಲಿ ತೊಡಗಿದ್ದರು. ಈ ಹೈಡ್ರಾಮಾ ನೋಡಲು ನೂರಾರು ಜನರು ಸ್ಥಳದಲ್ಲಿ ಸೇರಿದ್ದರು. ಕೊನೆಗೂ ಯುವಕನ ಮನವೊಲಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ಕಂಬದಿಂದ ಕೆಳಗೆ ಕರೆತರುವಲ್ಲಿ ಯಶಸ್ವಿಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-914088275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.