ಕೋಮುವಾದಿ ಶಕ್ತಿ ಸೋಲಿಸಲು ದಸಂಸ ಮನವಿ

ಮಂಗಳವಾರ, ಏಪ್ರಿಲ್ 23, 2019
32 °C

ಕೋಮುವಾದಿ ಶಕ್ತಿ ಸೋಲಿಸಲು ದಸಂಸ ಮನವಿ

Published:
Updated:
Prajavani

ದೇವನಹಳ್ಳಿ: ದೇಶದಲ್ಲಿರುವ ಕೋಮುವಾದಿ ಶಕ್ತಿ ಸೋಲಿಸಲು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾಂಗ್ರೆಸ್ ಪಕ್ಷವನ್ನು  ಬೆಂಬಲಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದ ಆವರಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಧಿಕಾರ ಮೂಲಭೂತವಾದಿಗಳ ಅಧಿಪತ್ಯದಲ್ಲಿರುವುದರಿಂದ ಭಾರತದಲ್ಲಿ ಜನತೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಸಂಘರ್ಷ ನಡೆಸಬೇಕಾದ ಸನ್ನಿವೇಶ ಆರಂಭವಾಗಿದೆ ಎಂದು ದೂರಿದರು.

ಸಬ್ ಕಿ ಸಾತ್ ಸಬ್ ಕಾ ವಿಕಾಸ್, ಮನ್ ಕೀ ಬಾತ್ ಮತ್ತು ಬೇಟಿ ಪಡಾವೊ ಬೇಟಿ ಬಚಾವೋ ಹೆಸರನಲ್ಲಿ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಜನ ವಿರೋಧಿ, ದಲಿತ ವಿರೋಧಿ, ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳ ಬಗ್ಗೆ ಮಾತನಾಡುವ
ಚಳವಳಿಗಾರರನ್ನು ದೇಶದ್ರೋಹಿ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ಜೋಗಿಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವ ಹೆಸರಿನಲ್ಲಿ ಸಂವಿಧಾನವನ್ನೇ ಮುಂದೆ ಮಾಡಿ ಅಧಿಕಾರದ ಗದ್ದುಗೆ ಏರಿದ ಶಕ್ತಿಗಳು ಐದು ವರ್ಷಗಳಲ್ಲಿ ಹಿಂದೂ ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ತಿಮ್ಮರಾಯಪ್ಪ, ತಾಲ್ಲೂಕು ಸಂಘಟನಾ ಸಂಚಾಲಕರಾದ ಸಿ.ಮುನಿರಾಜು, ರಮೇಶ್, ಅಜಯ್, ಮುರುಳೀಧರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !