ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಸೌಲಭ್ಯಕ್ಕೆ ಅರ್ಜಿ

Last Updated 10 ಜುಲೈ 2022, 6:02 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿ ಬಾಳೆ, ಡ್ಯ್ರಾಗನ್‌ ಹಣ್ಣು, ದಾಳಿಂಬೆ, ಪ್ಲಾಸ್ಟಿಕ್‌ ಹೊದಿಕೆ, ಗೆಡ್ಡೆ ಜಾತಿಯ ಹೂವಿನ ಬೆಳೆ ಹಾಗೂ 20 ಎಚ್‌.ಪಿಗಿಂತ ಕಡಿಮೆ ಶಕ್ತಿ ಇರುವ ಟ್ರ್ಯಾಕ್ಟರ್‌, ವೈಯಕ್ತಿಕ ಕೃಷಿ ಹೊಂಡ, ಸಾಮೂಹಿಕ ಕೃಷಿ ಹೊಂಡ, ಪ್ಯಾಕ್ ಹೌಸ್ ಘಟಕ, ಶೀತಲ ವಾಹನ, ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಆಸಕ್ತ ರೈತರು ಜುಲೈ 30ರ ಒಳಗಾಗಿ ಸೂಕ್ತ ದಾಖಲಾತಿಯೊಂದಿಗೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿ ಅಥವಾ ಮೊಬೈಲ್ 98802 10892, 97418 95988, 95385 37491 ಸಂಪರ್ಕಿಸಬಹುದು ಎಂದುತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಎಂ.ಎಸ್. ದೀಪಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT