ವಿದ್ಯುತ್ ಅಪಘಾತ ಜಾಗೃತಿಗೆ ಚಿತ್ರಕಲಾ ಸ್ಪರ್ಧೆ

7

ವಿದ್ಯುತ್ ಅಪಘಾತ ಜಾಗೃತಿಗೆ ಚಿತ್ರಕಲಾ ಸ್ಪರ್ಧೆ

Published:
Updated:
Deccan Herald

ದೊಡ್ಡಬಳ್ಳಾಪುರ: ವಿದ್ಯುತ್ ಇವತ್ತು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಆದರೆ ಇದರ ಸುರಕ್ಷತೆ, ಉಳಿತಾಯದ ಬಗ್ಗೆ ಮಾತ್ರ ನಾವು ಸದಾ ನಿರ್ಲಕ್ಷ್ಯ ವಹಿಸುತ್ತೇವೆ. ಇದರಿಂದ ನಡೆಯುವ ಅನಾಹುತಗಳನ್ನು ತಪ್ಪಿಸಲು ಸಾಕಷ್ಟು ಅವಕಾಶಗಳಿವೆ ಎಂದು ಬೆಸ್ಕಾಂ ನಗರದ ಉಪವಿಭಾಗದ ಎಂಜಿನಿಯರ್ ಸುಂದರೇಶ ನಾಯ್ಕ್ ಹೇಳಿದರು.

ಅವರು ನಗರದ ಇನ್ಫೋಸಿಟಿಯಲ್ಲಿ ವಿದ್ಯಾರ್ಥಿಗಳಿಗಾಗಿ ಬೆಸ್ಕಾಂ ವತಿಯಿಂದ ಶನಿವಾರ ನಡೆಸಲಾದ ಚಿತ್ರಕಲಾ ಸ್ಪರ್ಧೆ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯುತ್ ಅವಘಡಗಳು ಮನೆಯ ಒಳಗೆ ಮತ್ತು ಹೊರಗೂ ನಡೆಯುತ್ತವೆ. ಇವುಗಳಿಂದ ಜೀವನ ಹಾನಿ, ಅಂಗವಿಕಲತೆಗಳು ಉಂಟಾಗುತ್ತವೆ. ಇವುಗಳನ್ನು ತಡೆಯಲು ವಿದ್ಯಾರ್ಥಿ ದಿಸೆಯಿಂದಲೇ ಅರಿವು ಮೂಡಿಸಲು, ವಿದ್ಯುತ್ ಉಳಿಸುವುದು ಸೇರಿದಂತೆ ಹಲವಾರು ವಿಚಾರಗಳನ್ನು ಒಳಗೊಂಡಂತೆ ಚಿತ್ರ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢ ಶಾಲೆ, ಪಿಯು ಕಾಲೇಜು ಮೂರು ಹಂತದಲ್ಲಿ ನಡೆಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡಲಾಗುತ್ತಿದೆ ಎಂದರು.

ಚಿತ್ರಕಲಾ ಸ್ಪರ್ಧೆಗೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಮಾತನಾಡಿ, ‘ಮಕ್ಕಳಲ್ಲಿ ಹಲವಾರು ರೀತಿಯ ಸೃಜಲಶೀಲ ಆಲೋಚನೆಗಳು ಇರುತ್ತವೆ. ಇವರಿಂದಲು ನಾವು ಕಲಿಯುವುದು ಸಾಕಷ್ಟು ಇರುತ್ತದೆ. ಚಿತ್ರಕಲೆಯಂತಂಹ ಸ್ಪರ್ಧೆಗಳನ್ನು ನಡೆಸಿದಾಗ ವಿದ್ಯುತ್ ಅಪಘಾತಗಳನ್ನು ತಡೆಯಲು, ವಿದ್ಯುತ್ ಉಳಿಸಲು ಹಲವಾರು ರೀತಿಯ ಸಲಹೆ, ಸೂಚನೆಗಳು ದೊರೆಯುತ್ತವೆ’ ಎಂದರು.

ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಂಜಿನಿಯರ್ ಪ್ರಕಾಶ್ ಕುಮಾರ್, ಬೆಸ್ಕಾಂನ ಸಹಾಯಕ ಎಂಜಿನಿಯರ್ ಗಳಾದ ಮೋಹನ್ ಕುಮಾರ್, ರಾಜಪ್ಪ, ಹನುಮಂತಗೌಡ, ನಟೇಶ್, ಚಿದಾನಂದ್, ಡಿ.ಎಲ್.ಗಂಗಾಧರ್, ಬೆಸ್ಕಾಂ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕಲಾವತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !