‘ಸಂಘಗಳು ಪಕ್ಷಾತೀತವಾಗಿ ನಡೆಯಲಿ’

7

‘ಸಂಘಗಳು ಪಕ್ಷಾತೀತವಾಗಿ ನಡೆಯಲಿ’

Published:
Updated:
Prajavani

ದೇವನಹಳ್ಳಿ: ಎಲ್ಲಡೆ ‌ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು ಸ್ಥಳೀಯರು ಅವಿರೋಧ ಆಯ್ಕೆಗೆ ಒತ್ತು ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಸಲಹೆ ನೀಡಿದರು.

ಇಲ್ಲಿನ ಕೊಡಗುರ್ಕಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಕಾರ ಸಂಘ ಸ್ಥಳೀಯರ ಜೀವನಾಡಿ. ಹೆಸರೇ ಸೂಚಿಸುವಂತೆ ಸಹಕಾರ ಸಂಘ ಎಂಬುದು ಪರಸ್ಪರ ವಿಶ್ವಾಸ ಮತ್ತು ಸಹಕಾರದಿಂದ ಸಂಘಗಳು ಅಭಿವೃದ್ಧಿಯಾಗಬೇಕು. ಸಹಕಾರ ಸಂಘಗಳು ಪಕ್ಷಾತೀತವಾಗಿ ಅಭಿವೃದ್ಧಿಯತ್ತ ಸಾಗಬೇಕಾದರೆ ಸರ್ವಸಮ್ಮತದ ನಿರ್ಣಯ ಮತ್ತು ಹಿರಿಯರ ಮಾರ್ಗದರ್ಶನ ಅತ್ಯಂತ ಮುಖ್ಯವಾಗಿರುತ್ತದೆ ಎಂದರು.

ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿ, ಕಳೆದ ಹತ್ತಾರು ವರ್ಷದಿಂದ ಸಂಘದಲ್ಲಿ ಸಕ್ರಿಯವಾಗಿರುವ ಆನೇಕ ಮುಖಂಡರ ಪರಿಶ್ರಮದಿಂದ ಸಂಘ ಪ್ರಗತಿಯಾಗಿದೆ ಎಂದರು.

ಎಂ.ಪಿ.ಸಿ.ಎಸ್ ನೂತನ ಅಧ್ಯಕ್ಷ ಕೆ.ನಂದಕುಮಾರ್ ಮಾತನಾಡಿ, ಸಂಘ ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಯಲು ನೂತನ ನಿರ್ದೇಶಕರು, ಹಿರಿಯ ಮುಖಂಡರ ಸಹಕಾರ ಅಗತ್ಯ ಎಂದು ಹೇಳಿದರು.

ಉಪಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಮಾತನಾಡಿದರು. ನೂತನ ನಿರ್ದೇಶಕರಾದ ಎಂ.ಚೆನ್ನಕೇಶವಯ್ಯ, ಎ.ನಾಗರಾಜ್, ಎ.ಕೃಷ್ಣಪ್ಪ, ಕೆ.ರಮೇಶ್, ಎನ್.ಭೈರೇಗೌಡ, ಅಮರಾವತಿ, ಕೆ.ಎಂ.ಮುನಿರಾಜು, ಎ. ಮಂಜುನಾಥ್, ಕೃಷ್ಣಪ್ಪ, ಎಂ.ಶೋಭಾ, ಚಂದ್ರಮ್ಮ, ಒಕ್ಕಲಿಗರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಗೌಡ, ವಿ.ಎಸ್.ಎಸ್.ಎನ್ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಕೃಷ್ಣಪ್ಪ, ಮುಖಂಡರಾದ ಚನ್ನರಾಯಗೌಡ, ನಾಗರಾಜ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !