ಅತ್ತಿಬೆಲೆ (ಆನೇಕಲ್): ಅತ್ತಿಬೆಲೆಯಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಭೀಮೋತ್ಸವ ವೈಭವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ನೀಲಿ ಧ್ವಜಗಳು ರಾರಾಜಿಸಿದವು. ಯುವಕರು ತಮಟೆಯ ಸದ್ದಿಗೆ ನೀಲಿ ಧ್ವಜಗಳು ಮತ್ತು ಅಂಬೇಡ್ಕರ್ ಅವರ ಚಿತ್ರಗಳನ್ನು ಹಿಡಿದು ಕುಣಿದು ಸಂಭ್ರಮಿಸಿದರು. ಅಂಬೇಡ್ಕರ್ ಘೋಷಣೆಗಳನ್ನು ಕೂಗಿ ಯುವಕರು ಜಾಗೃತಿ ಮೆರವಣಿಗೆ ನಡೆಸಿದರು. 50ಕ್ಕೂ ಹೆಚ್ಚು ಪಲ್ಲಕ್ಕಿಗಳು ಮತ್ತು 10ಕ್ಕೂ ಹೆಚ್ಚು ಜಾನಪದ ಕಲಾತಂಡಗಳೊಂದಿಗೆ ಭೀಮೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡವು.

ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ 150 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅತ್ತಿಬೆಲೆ ಪುರಸಭೆಯ ಪೌರಕಾರ್ಮಿಕರಿಗೆ ದಿನಸಿ ಕಿಟ್ಗಳ ವಿತರಿಸಿದರು. ದಲಿತ ಪರ ಹೋರಾಟಗಾರರು ಮತ್ತು ಅಂಬೇಡ್ಕರ್ ವಾದಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಾಬ ಸಾಹೇಬ್ ಅಂಬೇಡ್ಕರ್ ಅವರ ಜೀವನ, ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ಅವರ ತತ್ವ, ಸಿದ್ಧಾಂತಗಳನ್ನು ಮೆರೆಸಬೇಕು. ಶಿಕ್ಷಣವೆಂಬ ಹುಲಿಯ ಹಾಲನ್ನು ಕುಡಿದವರು ಘರ್ಚಿಸಲೇಬೇಕು. ಹಾಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.

ಅಂಬೇಡ್ಕರ್ ಸಮಾಜದಕ್ಕೆ ಬೆಳಕಿದ್ದಾರೆ. ಶೋಷಣೆಗೆ ಒಳಗಾದವರ ಹಕ್ಕು ರಕ್ಷಿಸಲು ಅಂಬೇಡ್ಕರ್ ವಾದಿಗಳು ಪ್ರತಿನಿತ್ಯ ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಅಂಬೇಡ್ಕರ್ ಅವರ ಹೆಸರನ್ನು ಶಾಶ್ವತಗೊಳಿಸಬೇಕು ಎಂದರು.

ಮಾಜಿ ಸಚಿವ ಎನ್.ಮಹೇಶ್, ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಪ್ರತಿಯೊಬ್ಬರಿಗೂ ಹಕ್ಕುಗಳು ಮತ್ತು ಕರ್ತವ್ಯಗಳು ದೊರೆತಿವೆ. ಅವರ ಆಶಯಗಳನ್ನು ಪಾಲಿಸುವುದರಿಂದ ಅಂಬೇಡ್ಕರ್ ಅವರ ಜೀನ್ಸ್ ಜಿನೀಯಸ್ ಆಗಿ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಅಂಬೇಡ್ಕರ್ ಅವರ ಚೈತನ್ಯ ಮತ್ತು ಅಂಬೇಡ್ಕರ್ ಅವರ ಶೈಕ್ಷಣಿಕ ಕ್ರಾಂತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಭೀಮೋತ್ಸವ ಕಾರ್ಯಕ್ರಮದಡಿಯಲ್ಲಿ 150 ಮಂದಿ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಶಾಸಕ ಬಿ.ಶಿವಣ್ಣ, ಕೆಜಿಎಫ್ನ ಮಾಜಿ ಶಾಸಕ ವೈ.ಸಂಪಂಗಿ, ಮುಖಂಡರಾದ ಪಟಾಪಟ್ ನಾಗರಾಜು, ಕೆ.ಪಿ.ರಾಜು, ಹುಸ್ಕೂರು ಮಧು, ಹುಲ್ಲಹಳ್ಳಿ ಶ್ರೀನಿವಾಸ್, ಚಿಕ್ಕನಾಗಮಂಗಲ ಗುರು, ಪ್ರೊ.ಹರಿರಾಮ್, ಟಿ.ವಿ.ಬಾಬು, ಸರ್ಜಾಪುರ ಶಂಭಯ್ಯ, ಪಟಾಪಟ್ ಪ್ರಕಾಶ್, ಮಂಜುನಾಥ ದೇವ, ಪಟಾಪಟ್ ರವೀಂದ್ರ, ಶ್ರೀನಿವಾಸಸ್, ಸುರೇಶ್, ಎಂ.ಸಿ.ಹಳ್ಳಿ ವೇಣು, ಶ್ರೀನಿವಾಸ್, ಸಿಂಗೇನಅಗ್ರಹಾರ ಗೌರೀಶ್, ಬಳ್ಳೂರು ಮುನಿವೀರಪ್ಪ, ಎಸ್.ಎಲ್.ವಿ.ಮುರಳಿ, ವಕೀಲರಾದ ಅತ್ತಿಬೆಲೆ ಸಂಘರ್ಷ, ಗುಡ್ಡಹಟ್ಟಿ ಅನಿಲ್, ಜಿಗಳ ಬಾಬು, ಮುತ್ತಾನಲ್ಲೂರು ಶ್ರೀನಿವಾಸ ಸರ್ಜಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-15-1571633025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.