ವ್ಯರ್ಥವಾಗುತ್ತಿರುವ ಕುಡಿಯುವ ನೀರು: ಪುರಸಭೆ ನಿರ್ಲಕ್ಷ್ಯ ಆರೋಪ

7

ವ್ಯರ್ಥವಾಗುತ್ತಿರುವ ಕುಡಿಯುವ ನೀರು: ಪುರಸಭೆ ನಿರ್ಲಕ್ಷ್ಯ ಆರೋಪ

Published:
Updated:
Deccan Herald

ದೇವನಹಳ್ಳಿ: ನಗರದ ಪಶು ವೈದ್ಯಕೀಯ ಕಚೇರಿ ಆವರಣಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿದೆ. ಇದನ್ನು ಸರಿಪಡಿಸುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ದೂರಿದರು.

ಪುರಸಭೆ ಕಚೇರಿ ಆವರಣದಲ್ಲಿರುವ ಓವರ್ ಹೆಡ್ ಟ್ಯಾಂಕ್ ಮತ್ತು ಕುಡಿಯುವ ನೀರಿನ ಶೇಖರಣಾ ಘಟಕದಿಂದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲು ಆಳವಡಿಸಿರುವ ಪೈಪ್‌ಲೈನ್ ಜಂಕ್ಷನ್ ಬಾಕ್ಸ್‌ ಬಿಗಿ ಮಾಡಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ. ಅನೇಕ ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಗಂಗಾಧರ್ ಆರೋಪಿಸಿದರು.

ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡುಗಳಿಗೆ 10 ರಿಂದ 12 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಉಪ್ಪು ನೀರು ಮೂರು ದಿನಗಳಿಗೊಮ್ಮೆ ನಲ್ಲಿಗಳಲ್ಲಿ ನೋಡುವಂತಾಗಿದೆ. ಪೈಪುಗಳು ಎಲ್ಲಿ ಒಡೆದುಹೊಗಿದೆ, ಯಾವ ಜಂಕ್ಷನ್ ಬಾಕ್ಸ್‌ಗಳಲ್ಲಿ ನೀರು ಹೋಗುತ್ತಿದೆ ಎಂಬುದು ಅಧಿಕಾರಿಗಳಿಗೆ ತಿಳಿದಿಲ್ಲ ಎಂಬುದಾಗಿ ಪಶುವೈದ್ಯಕೀಯ ಆಸ್ಪತ್ರೆ ಸಿಬ್ಬಂದಿ ದೂರಿದರು.

‘ಪುರಸಭೆಗೆ ಹೋಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ನೀರು ವ್ಯರ್ಥವಾಗಿ ಹರಿಯುತ್ತಿದೆ ಎಂದು ನಾಲ್ಕೈದು ಬಾರಿ ತಿಳಿಸಿದ್ದೇನೆ. ಇಡೀ ಆಸ್ಪತ್ರೆ ಆವರಣ ನೀರಿನಿಂದ ತುಂಬಿ ಹೊರಹೋಗುತ್ತದೆ. ಸದಾಕಾಲ ನೀರು ಹರಿಯುವುದರಿಂದ ವಿಪರೀತ ಸೊಳ್ಳೆ ಕಾಟವಿದೆ. ದುರಸ್ತಿ ಮಾಡಿ ಎಂದು ಅಂಗಲಾಚಿದರೂ ಈವರೆಗೆ ಬಂದಿಲ್ಲ’ ಎಂಬುದಾಗಿ ಆಸ್ಪತ್ರೆ ನೌಕರ ಶ್ರೀನಿವಾಸ್ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !