ಸೋಮವಾರ, ಫೆಬ್ರವರಿ 17, 2020
25 °C

ಬನ್ನೇರುಘಟ್ಟಕ್ಕೆ ನೂತನ ಅತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ವನಶ್ರೀ, ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದು ನೂತನ ಅತಿಥಿಯ ಆಗಮನದಿಂದಾಗಿ ಉದ್ಯಾನದ ಆನೆಗಳ ಸಂಖ್ಯೆ 23ಕ್ಕೇರಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್‌ ತಿಳಿಸಿದ್ದಾರೆ.

ಉದ್ಯಾನದ 13 ವರ್ಷದ ವನಶ್ರೀಗೆ ಇದು ಎರಡನೇ ಸಂತಾನವಾಗಿದ್ದು ಫೆಬ್ರವರಿ 2014ರಲ್ಲಿ ಮರಿಯೊಂದಕ್ಕೆ ಜನ್ಮನೀಡಿತ್ತು. ಇದೀಗ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ವೈದ್ಯರ ಮಾರ್ಗದರ್ಶನದಲ್ಲಿ ಆರೈಕೆ ಮಾಡಲಾಗುತ್ತಿದೆ. ತಾಯಿಗೆ ಬೆಲ್ಲ, ಕಬ್ಬು ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ನೀಡಿ ಪೋಷಣೆ ಮಾಡಲಾಗುತ್ತಿದೆ ಎಂದು ಉದ್ಯಾನದ ವೈದ್ಯರು ತಿಳಿಸಿದ್ದಾರೆ.

ನೂತನ ಆನೆ ಮರಿಗೆ ‘ತುಳಸಿ’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಪರಿಸರ ಸಂರಕ್ಷಣೆಯ ಕಾಳಜಿಯುಳ್ಳ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ತುಳಸಿ ಗೌಡ ಅವರ ಹೆಸರನ್ನು ಈ ಹೆಣ್ಣು ಮರಿಗೆ ನಾಮಕರಣ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು