ವಿಜಯಪುರ:ಚಿಕ್ಕಬಳ್ಳಾಪುರ ರಸ್ತೆಯ ಚಿಕ್ಕನಹಳ್ಳಿ ಕೆರೆಯ ಕಟ್ಟೆಯ ಗಂಗಾತಾಯಿ ಗುಡಿಯಲ್ಲಿ ಗುರುವಾರ ಬೆಳಗಿನ ಜಾವ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದಾರೆ.
ಬಟ್ಟೆಯಲ್ಲಿ ಸುತ್ತಿದ ನವಜಾತ ಶಿಶುವನ್ನುಗುಡಿಯಲ್ಲಿ ದೇವರಮೂರ್ತಿ ಮುಂದೆ ಮಲಗಿಸಿ ಹೋಗಿದ್ದಾರೆ.ಬೆಳಗಿನ ಜಾವ ಮೈ ಕೊರೆಯುವ ಚಳಿಯಲ್ಲಿ ಮಗುವಿನ ಅಳುವನ್ನು ಕೇಳಿ ಜನರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಸಹಾಯವಾಣಿ ಸಿಬ್ಬಂದಿ ನವಜಾತ ಹೆಣ್ಣು ಶಿಶುವನ್ನು ರಕ್ಷಣೆ ಮಾಡಿ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಮಗು ಆರೋಗ್ಯವಾಗಿದ್ದುಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.