ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಟ್ರೋಫಿ

Last Updated 25 ಡಿಸೆಂಬರ್ 2019, 16:31 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಬಿಲ್ಲಾಪುರ ಸಮೀಪದ ಇಂಡಸ್‌ ಇಂಟರ್‌ನ್ಯಾಷನಲ್‌ ವಿದ್ಯಾ ಸಂಸ್ಥೆಯಲ್ಲಿ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ 14 ವರ್ಷದೊಳಗಿನ ೬೫ನೇ ರಾಷ್ಟ್ರೀಯ ಶಾಲಾ ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಪ್ರೇರಣಾ ನಂದಕುಮಾರ್‌ ಶೇಠ್‌ ಮತ್ತು ಬಾಲಕರ ವಿಭಾಗದಲ್ಲಿ ರಾಜಸ್ಥಾನದ ಅಕ್ಷತ್‌ಕುಮಾರ್‌ ಪ್ರಥಮ ಸ್ಥಾನ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಆಂಧ್ರಪ್ರದೇಶದ ತಮರಿ ಸೂರ್ಯ ಚರಿಷ್ಮಾ ದ್ವಿತೀಯ ಮತ್ತು ಗುಜರಾತ್‌ನ ಆಯೇಷಾ ಗಾಂಧಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ದೆಹಲಿಯ ದೇವಾಂಗ್‌ ತೋಮರ್‌ ದ್ವಿತೀಯ ಮತ್ತು ಮಹಾರಾಷ್ಟ್ರದ ಪ್ರಣಾಂತ್‌ ಶೆಟಿಗಾರ್‌ ತೃತೀಯ ಸ್ಥಾನ ಗಳಿಸಿದ್ದಾರೆ.

ಗುಂಪು ವಿಭಾಗದಲ್ಲಿ ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ಪಿ.ಪ್ರಶೀತಾ, ಆರ್‌.ಪ್ರಬಂಧಿಕ, ಕರಣ್‌ ಆಸ್ಟೀನ್‌, ಕೆ.ಎಂ.ಶಿವ್‌ ಅದ್ರಾನಿ, ಕಮಲಿಕರಣಿ ಅವರ ತಂಡ ಪ್ರಥಮ ಸ್ಥಾನ ಗಳಿಸಿ ಟ್ರೋಪಿ ಮತ್ತು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ ತಂಡ ದ್ವಿತೀಯ ಮತ್ತು ಕರ್ನಾಟಕ ತಂಡ ತೃತೀಯ ಸ್ಥಾನ ಪಡೆದಿದೆ.

ಬಾಲಕರ ವಿಭಾಗದಲ್ಲಿ ರಾಜಸ್ತಾನದ ಅಕ್ಷತ್‌ ಕುಮಾರ್‌, ಕುನಾಲ್‌ ಚೌಧರಿ, ಹರ್ಷ್‌ ಟೈಲರ್‌, ಸ್ವಾತಿಕ್‌ ಅವಸ್ತಿ, ನೀಲ್ ಸಂದೀರ್‌ ತಂಡವು ಪ್ರಥಮ ಸ್ಥಾನಗಳಿಸಿದೆ. ಜಾರ್ಖಂಡ್‌ ದ್ವಿತೀಯ ಸ್ಥಾನ ಮತ್ತು ಮಹಾರಾಷ್ಟ್ರ ತೃತೀಯ ಸ್ಥಾನ ಗಳಿಸಿದೆ.

ಇಂಡಸ್‌ ಟ್ರಸ್ಟ್‌ನ ನಿರ್ದೇಶಕ ಕ.ಸತ್ಯರಾವ್‌ ಮತ್ತು ಕ್ರೀಡೆಯ ನೋಡಲ್‌ ಅಧಿಕಾರಿ ಡಾ.ಪೂವಯ್ಯ, ಇಂಡಸ್‌ ಸಮುದಾಯ ಶಾಲೆಯ ಡಾ.ಸುಜಯಾ ವಿಜೇತರಿಗೆ ಬಹುಮಾನ ವಿತರಿಸಿದರು. ನಾಲ್ಕು ದಿನಗಳ ಕಾಲ ನಡೆದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಎಲ್ಲ ರಾಜ್ಯಗಳ 35 ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT