ರೈತರಿಂದ ಅಧಿಕಾರಿಗಳಿಗೆ ತಡೆ; ಪೊಲೀಸರ ಮನವೊಲಿಕೆ

7
ತಮ್ಮನಾಯಕನಹಳ್ಳಿ: ರಕ್ಷಣಾ ಇಲಾಖೆ ಅಧಿಕಾರಿಗಳಿಂದ ಬಿಬಿಎಂಪಿಯ ಸ್ಥಳ ಪರಿಶೀಲನೆ

ರೈತರಿಂದ ಅಧಿಕಾರಿಗಳಿಗೆ ತಡೆ; ಪೊಲೀಸರ ಮನವೊಲಿಕೆ

Published:
Updated:
Deccan Herald

ಆನೇಕಲ್: ರಸ್ತೆ ವಿಸ್ತರಣೆಗೆ ಬೆಂಗಳೂರಿನಲ್ಲಿ ಮಿಲಿಟರಿ ವಶದಲ್ಲಿರುವ ಜಾಗವನ್ನು ನೀಡುವಂತೆ ಕೇಂದ್ರ ರಕ್ಷಣಾ ಸಚಿವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬದಲಿಯಾಗಿ ಬಿಬಿಎಂಪಿಗೆ ಸೇರಿದ ಜಾಗವನ್ನು ರಕ್ಷಣಾ ಇಲಾಖೆಗೆ ನೀಡಬೇಕಾಗಿರುವುದರಿಂದ ತಮ್ಮನಾಯಕನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಲಾಯಿತು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.

ಅವರು ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ವೆ ನಂ.23ರಲ್ಲಿ 207ಎಕರೆ ಜಮೀನು ಕಂದಾಯ ಇಲಾಖೆಯಿಂದ ಬಿಬಿಎಂಪಿಗೆ ವರ್ಗಾವಣೆಯಾಗಿದೆ. ಆದರೆ, ಬಿಬಿಎಂಪಿ ಈ ಸ್ಥಳವನ್ನು ಬಳಸದೆ ಇರುವುದರಿಂಧ ರಕ್ಷಣಾ ಇಲಾಖೆಗೆ ನೀಡಲು ಒಪ್ಪಿದ್ದಾರೆ. ರಕ್ಷಣಾ ಇಲಾಖೆಯ ಮುಂಬೈ, ದೆಹಲಿ, ಪುಣೆಯ ಹಿರಿಯ ಅಧಿಕಾರಿಗಳ ಜತೆ ಸ್ಥಳೀಯ ಕಮಾಂಡಿಂಗ್ ಆಫೀಸರ್ ಸ್ಥಳ ವೀಕ್ಷಣೆಗೆ ಬಂದಿದ್ದಾರೆ. ಬಿಬಿಎಂಪಿಯ ಜಾಗ ರಕ್ಷಣಾ ಇಲಾಖೆಗೆ ಸೂಕ್ತವಾಗಿದೆ ಎಂಬ ಅಭಿಪ್ರಾಯವಿದೆ. ಗುಡ್ಡಗಾಡು ಪ್ರದೇಶವಾಗಿದ್ದು ತರಬೇತಿಗೆ ಅನುಕೂಲವಾಗಿದೆ. ಸಮತಟ್ಟು ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಒಪ್ಪಿಗೆ ನೀಡಿದರೆ ಹಸ್ತಾಂತರ ಮಾಡುವುದಾಗಿ ಮಹೇಂದ್ರ ಜೈನ್ ಅವರು ತಿಳಿಸಿದರು.

ಬಿಬಿಎಂಪಿ ಗುರುತಿಸಿರುವ ಜಾಗದ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿರುವ ಹಳ್ಳವನ್ನು ಬಿಬಿಎಂಪಿ ವತಿಯಿಂದ ಮುಚ್ಚಿ ಸಮ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಗಣಿಗಾರಿಕೆ ನಿಲ್ಲಿಸುವಂತೆ ಹಾಗೂ ಪರವಾನಗಿ ನವೀಕರಣ ಮಾಡದಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.

ಬಿಬಿಎಂಪಿ ಮೇಯರ್ ಸಂಪತ್‌ ರಾಜ್ ಮಾತನಾಡಿ, ಕೇಂದ್ರ ರಕ್ಷಣಾ ಸಚಿವರು ಹಾಗೂ ಮುಖ್ಯಮಂತ್ರಿಗಳ ಸಭೆಯಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಜಾಗ ಬಳಕೆ ಮಾಡುವ ಬಗ್ಗೆ ಹಾಗೂ ಪರ್ಯಾಯವಾಗಿ ಬಿಬಿಎಂಪಿ ಜಾಗ ಹಸ್ತಾಂತರಿಸುವ ಸಂಬಂಧ ಮಾತುಕತೆ ನಡೆದಿದೆ. ಹಾಗಾಗಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಬಂದಿದ್ದಾರೆ. 5–6 ವರ್ಷದಿಂದ ಚರ್ಚೆಗಳು ನಡೆಯುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ರಸ್ತೆ ವಿಸ್ತರಣೆಗೆ ರಕ್ಷಣಾ ಇಲಾಖೆಗೆ ಜಾಗದ ಅವಶ್ಯ ಇದೆ. ಈ ಸಂಬಂಧ ರಕ್ಷಣಾ ಸಚಿವರು ಸೂಚಿಸಿದ್ದು, ಬದಲಿ ಜಾಗ ಸೇನೆ ಒಪ್ಪಿದರೆ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಇಲ್ಲವಾದಲ್ಲಿ ಬೇರೆ ಸ್ಥಳ ಗುರುತಿಸಲಾಗುವುದು ಎಂದರು.

ರಕ್ಷಣಾ ಇಲಾಖೆಗೆ ಜಮೀನು ನೀಡುವುದು ಬೇಡ ಎಂದು ಒತ್ತಾಯಿಸಿ ಸ್ಥಳೀಯ ರೈತರು ಪರಿಶೀಲನಾ ತಂಡವನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ರೈತರು ಚದುರಿಸಿ ಅಧಿಕಾರಿಗಳು ತೆರಳಲು ಅನುವು ಮಾಡಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !