ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾವೇರಿ ಮತ್ತು ಕೋಕಿಲ ಎಂಬ ಎರಡು ಜಿಬ್ರಾಗಳು ಹೆಣ್ಣು ಮರಿಗಳಿಗೆ ಜನ್ಮ ನೀಡಿವೆ.

ತಾಯಿ ಮತ್ತು ಮರಿಗಳು ಆರೋಗ್ಯದಿಂದ ಇದ್ದು, ಉದ್ಯಾನದ ಸಿಬ್ಬಂದಿ ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಮರಿ ಜೀಬ್ರಾಗಳ ತುಂಟತನದಿಂದ ಉದ್ಯಾನದಲ್ಲಿ ಸಂಭ್ರಮ ಮನೆಮಾಡಿದೆ.

ಜ.17ರಂದು ಕೋಕಿಲ ಮತ್ತು ಜ.28ರಂದು ಕಾವೇರಿ ಹೆಸರಿನ ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿದ್ದು, ಇದರಿಂದಾಗಿ ಉದ್ಯಾನದಲ್ಲಿ ಜೀಬ್ರಾಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ.

ತಾಯಿ ಮತ್ತು ಮರಿ ಜೀಬ್ರಾಗಳ ಆರೋಗ್ಯದ ಬಗ್ಗೆ ಉದ್ಯಾನದ ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.