ಸೋಮವಾರ, ಜನವರಿ 27, 2020
28 °C

ಜಾಂಬೋರೇಟ್‍ನಲ್ಲಿ ಗಮನ ಸೆಳೆದ ಬಿಬಿಎಂಪಿ ಸ್ಕೌಟ್ಸ್, ಗೈಡ್ಸ್ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಇಲ್ಲಿನ ಅನಿಬೆಸೆಂಟ್ ಪಾರ್ಕ್‍ನಲ್ಲಿ ನಡೆಯುತ್ತಿರುವ 28ನೇ ಜಾಂಬೋರೇಟ್‍ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಭಾಗವಹಿಸಿ ಗಮನ ಸೆಳೆಯಿತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಸ್ಕೌಟ್ಸ್‌ ಮತ್ತು ಗೈಡ್ಸ್ ಘಟಕ ಆರಂಭಿಸಲಾಗಿದೆ. ಈಗಿನ ಜಾಂಬೋರೇಟ್ ಶಿಬಿರದಲ್ಲಿ ಸ್ಕೌಟ್ಸ್‌ನ 73 ಶಿಬಿರಾರ್ಥಿಗಳು, ಗೈಡ್ಸ್‌ನ 78 ಶಿಬಿರಾರ್ಥಿಗಳೊಂದಿಗೆ 17 ಶಿಕ್ಷಕರು ಭಾಗವಹಿಸಿದ್ದಾರೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ, ಬಡ, ಕೂಲಿ ಕಾರ್ಮಿಕರ ಮಕ್ಕಳು ಸಹ ಇದ್ದು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಶಿಬಿರದ ಸಾಹಸ ಕ್ರೀಡೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ’ ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಎಂ.ಎ.ಚಲ್ಲಯ್ಯ ತಿಳಿಸಿದರು.

ಬಿಬಿಎಂಪಿ ಶಿಬಿರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಶಾಸಕ ಯುಟಿ.ಖಾದರ್, ರಾಜ್ಯ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಕೆ.ಗಂಗಪ್ಪಗೌಡ, ಛಲವಾದಿ ಸಂಸ್ಥಾನದ ಶ್ರೀಬಸವ ನಾಗೀದೇವ ಶರಣ ಸ್ವಾಮೀಜಿ ಭೇಟಿ ನೀಡಿ ಬಿಡಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು