ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಸನ್ನದ್ಧ ಅಭ್ಯಾಸ ‘ಚಾಲೆಂಜರ್–2026’ ಈಚೆಗೆ ಯಶಸ್ವಿಯಾಗಿ ನಡೆಸಿತು.

ಡಿಜಿಸಿಎ ನಾಗರಿಕ ವಿಮಾನಯಾನ ನಿಯಮಗಳು ಹಾಗೂ ಐಸಿಎಒ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಯೋಜಿಸಿದ್ದ ತಾಲೀಮಿನಲ್ಲಿ ಸಂಕೀರ್ಣ ತುರ್ತು ಪರಿಸ್ಥಿತಿ ಸನ್ನಿವೇಶ ಸೃಷ್ಟಿಸಲಾಗಿತ್ತು. ವಿಮಾನ ನಿಲ್ದಾಣದ ಸಿದ್ಧತೆ, ಪ್ರತಿಕ್ರಿಯೆ ವ್ಯವಸ್ಥೆ ಹಾಗೂ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.

ಅಭ್ಯಾಸದಲ್ಲಿ ವಿಮಾನಯಾನ ಕ್ಷೇತ್ರದ 100ಕ್ಕೂ ಹೆಚ್ಚು ಸಹಯೋಗಿ ಸಂಸ್ಥೆಗಳು ಮತ್ತು 3,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ವಿವಿಧ ಘಟಕಗಳು, ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ, ಆಸ್ಪತ್ರೆ, ಸೇನಾ ಹಾಗೂ ಅರೆಸೇನಾ ಪಡೆಗಳು ಮತ್ತು ನಾಗರಿಕ ಸಂಘಟನೆಗಳು ಪಾಲ್ಗೊಂಡಿದ್ದವು.

ತುರ್ತು ಎಚ್ಚರಿಕೆ ವ್ಯವಸ್ಥೆ ಸಕ್ರಿಯಗೊಳಿಸುವಿಕೆ,ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ತುರ್ತು ಚಿಕಿತ್ಸಾ ನಿರ್ವಹಣೆ, ತುರ್ತು ಸಂಪನ್ಮೂಲಗಳ ನಿಯೋಜನೆ, ಸಂಚಾರ ನಿಯಂತ್ರಣ ಹಾಗೂ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಅಭ್ಯಾಸದ ವೇಳೆ ಪರಿಶೀಲಿಸಲಾಯಿತು.

ಒತ್ತಡದ ಪರಿಸ್ಥಿತಿಯಲ್ಲಿ ವಿವಿಧ ಸಂಸ್ಥೆಗಳ ನಡುವಿನ ಸಂವಹನ ವ್ಯವಸ್ಥೆ, ಸಮಯಪಾಲನೆ ಮತ್ತು ಸಮನ್ವಯ ಸಾಮರ್ಥ್ಯ ಪರಿಶೀಲಿಸಲಾಯಿತು.

‘ಚಾಲೆಂಜರ್–2026’ ತಾಲೀಮು ವಿಮಾನ ನಿಲ್ದಾಣದ ಎರಡನೇ ರನ್ವೇಯಲ್ಲಿ ವಿಮಾನಗಳ ಹಾರಾಟ ನಡೆಸುತ್ತಿದ್ದ ಸಮಯದಲ್ಲೇ ನಡೆಸಿದ್ದು ವಿಶೇಷವಾಗಿತ್ತು.

ಈ ಬಾರಿ ಹಲವು ಹೊಸ ತಾಂತ್ರಿಕ ಮತ್ತು ಕಾರ್ಯಾಚರಣೆ ಕ್ರಮಗಳನ್ನು ಪರಿಚಯಿಸಲಾಯಿತು. ತುರ್ತು ಪ್ರತಿಕ್ರಿಯ ತಂಡಗಳಿಗೆ ಅಗತ್ಯ ಮಾರ್ಗಸೂಚಿ ತ್ವರಿತವಾಗಿ ಒದಗಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಹಾಯಕ ಸಾಧನವನ್ನು ಬಳಸಲಾಯಿತು. ಘಟನಾ ವರದಿ ಮತ್ತು ನಿಗಾವಹಿಸಲು ರಿಯಲ್-ಟೈಮ್ ಅಳವಡಿಸಲಾಗಿತ್ತು.

ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಅಭ್ಯಾಸ ನಡೆಸಲಾಯಿತು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಸಹ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-15-1716094247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.