ಹೊಸಕೋಟೆ: ನಗರದ ಬಸವೇಶ್ವರ ನಗರದ ಲಕ್ಷ್ಮಿ ಗಣಪತಿ ದೇವಾಲಯದಲ್ಲಿ ಸೋಮವಾರ ತಡರಾತ್ರಿಯಲ್ಲಿ ಬೀಗ ಮುರಿದು ಚಿನ್ನದ ಮಾಂಗಲ್ಯ ಮತ್ತು ಸರ ಹಾಗೂ ಹುಂಡಿ ದೋಚಿ ಪಕ್ಕದ ಖಾಲಿ ನಿವೇಶನದಲ್ಲಿ ಬಿಸಾಡಿ ಕಳ್ಳರು ಪರಾರಿಯಾಗಿದ್ದಾರೆ.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹೇಮಂತ್ ಕುಮಾರ್, ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳವು ನಡೆದಿದೆ. ಶಾರದಾಂಬಾ, ಖಿಲ್ಲೆ ಆಂಜನೇಯಸ್ವಾಮಿ ಮತ್ತು ಕಣ್ಣೂರಹಳ್ಳಿ ಮಾರಮ್ಮ ದೇವಾಲಯದಲ್ಲೂ ಕೂಡ ಕಳವು ನಡೆದಿದೆ. ಪೋಲೀಸರು ಶೀಘ್ರ ಪ್ರಕರಣ ಭೇದಿಸಬೇಕೆಂದು ಆಗ್ರಹಿಸಿದರು.

ದೇವಾಲಯ ಆಡಳಿತ ಮಂಡಳಿ ಗೌರಾವಾಧ್ಯಕ್ಷ ಕೃಷ್ಣಪ್ಪ, ಅರ್ಚಕರಾದ ದೀಕ್ಷಿತ್, ಸದಸ್ಯರಾದ ಪ್ರಭಾಕರ್, ವಿಜಿ ಕುಮಾರ್, ದೇವರಾಜ್, ನಟರಾಜ್, ವೆಂಕಟೇಶ, ಪ್ರದೀಪ್, ರವಿ, ಮುರಳಿ, ಪಿಂಕಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.