ದೊಡ್ಡಬಳ್ಳಾಪುರ: ಮಳೆಯಿಂದ ಹಾನಿಯಾದ ವಿದ್ಯುತ್ ಕಂಬ ಹಾಗೂ ಪರಿವರ್ತಕ ದುರಸ್ತಿ ಕಾರ್ಯ ಬೆಸ್ಕಾಂ ಸಿಬ್ಬಂದಿ ಕೊರತೆ ಕಾರಣದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ನಾಲ್ಕು ದಿನಗಳಿಂದ ತಾಲ್ಲೂಕಿನ ಹಲವು ಗ್ರಾಮಗಳು ಕತ್ತಲಲ್ಲೇ ಮುಳುಗಿವೆ.

ಎಸ್ಎಸ್ಎಲ್ ಸೇರಿದಂತೆ ವಿವಿಧ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ರಾತ್ರಿ ಹೊತ್ತು ಓದಲು ಕಷ್ಟವಾಗುತ್ತಿದೆ. ಸೋಲಾರ್, ಮೊಬೈಲ್ ಮತ್ತು ಇತರ ಬ್ಯಾಟರಿ ಬೆಳಕಿನಲ್ಲಿ ಓದುತ್ತಿದ್ದಾರೆ.

ಯುಗಾದಿ ಹಬ್ಬದ ಹಿಂದಿನ ದಿನ ಮಾರ್ಚ್ 18ರಂದು ರಾತ್ರಿ ಬಿರುಗಾಳಿ ಸಹಿತ ಜೋರು ಮಳೆ ಸುರಿಯಿತು. ಇದರಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನೇಕ ಮರ ಹಾಗೂ 98 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. 17 ವಿದ್ಯುತ್ ಪರಿವರ್ತಕಗಳು (ಟಿ.ಸಿ) ಸುಟ್ಟು ಹೋಗಿವೆ. ತಾಲ್ಲೂಕಿನ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲು ಇನ್ನೂ ಸಾಧ್ಯವಾಗಿಲ್ಲ.

ಬೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ದುರಸ್ತಿ ಕಾಮಗಾರಿ ಮುಗಿಯದ ಕಾರಣ ನಾಲ್ಕು ದಿನಗಳಿಂದ ತಾಲ್ಲೂಕಿನ ಬಹುತೇಕ ಗ್ರಾಮಗಳು ಕತ್ತಲಲ್ಲಿ ಇವೆ. 26ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬುಧವಾರದಿಂದ ಹಬ್ಬದ ದಿನವಾದ ಗುರುವಾರ ಮಧ್ಯಾಹ್ನದವರೆಗೂ ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಿದರು.

ಮಾರ್ಚ್ 23ರಂದು ಎಸ್ಎಸ್ಎಲ್ಸಿ ವಿಜ್ಞಾನ ಪರೀಕ್ಷೆ ಇದೆ. ವಿದ್ಯುತ್ ಇಲ್ಲದ ಕಾರಣ ಪರೀಕ್ಷೆ ಮುನ್ನಾ ದಿನ ಅಭ್ಯಾಸ ಮಾಡಿ ಮನದಟ್ಟು ಮಾಡಲು ತೊಂದರೆಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಗ್ರಾಮೀಣ ಭಾಗದಲ್ಲಿ ಶೇಕಡ 75ರಷ್ಟು ವಿದ್ಯುತ್ ಸರಬರಾಜು ಸರಿಯಾಗಿದೆ. ಕಾರ್ಮಿಕ ಕೊರತೆ ಕಾರಣದಿಂದ ಕೆಲಸ ವಿಳಂಬವಾಗುತ್ತಿದೆ. ನಗರ ಉಪ ವಿಭಾಗದಲ್ಲಿ ಶೇ 80ರಷ್ಟು ವಿದ್ಯುತ್ ಸರಬರಾಜು ಸರಿಯಾಗಿದ್ದು, ಭಾನುವಾರ ಸಂಜೆ ವೇಳೆಗೆ ಯಥಾಸ್ಥಿತಿಗೆ ಮರಳುವ ನೀರಿಕ್ಷೆ ಇದೆ’ ಎಂದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.