ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ವಿದ್ಯುತ್ ರಿಯಾಯಿತಿ ಸ್ಥಗಿತ: ಹೋರಾಟಕ್ಕೆ ಸಜ್ಜು

Last Updated 30 ಸೆಪ್ಟೆಂಬರ್ 2020, 4:22 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಸ್ಕಾಂನಿಂದ ನೇಕಾರರು ಹೊಸ ಘಟಕಕ್ಕೆ ವಿದ್ಯುತ್ ಸಂಪರ್ಕ ಪಡೆದರೆ ಸರ್ಕಾರದಿಂದ ನೀಡಲಾಗುವ ರಿಯಾಯಿತಿ ಸಹಾಯಧನ ನಿಲ್ಲಿಸಲಾಗಿದೆ. ಈ ಹುನ್ನಾರದ ವಿರುದ್ದ ರಾಜ್ಯ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಹೇಳಿದರು.

ನಗರದಲ್ಲಿ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ನೇಕಾರರ ಸಭೆಯಲ್ಲಿ ಮಾತನಾಡಿದರು.

‘ಹೊಸ ಘಟಕಗಳಿಗೆ ಸರ್ಕಾರದಿಂದ ಬರಬೇಕಾದ ಸಹಾಯಧನ ಬರುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯುತ್ ರಿಯಾಯಿತಿ ಕುರಿತಂತೆ ಜವಳಿ ಇಲಾಖೆಯ ಪತ್ರಕ್ಕೆ ಉತ್ತರ ನೀಡಿರುವ ಬೆಸ್ಕಾಂ ಕಂಪನಿ ಪ್ರಧಾನ ವ್ಯವಸ್ಥಾಪಕರು, ಸರ್ಕಾರದಿಂದ ಜೂನ್ 2020ರ ಅಂತ್ಯಕ್ಕೆ ರಿಯಾಯಿತಿ ವಿದ್ಯುತ್‍ನ ಬಾಕಿ ₹195.05 ಕೋಟಿ ಇದೆ. ಆರ್ಥಿಕ ವರ್ಷ 2020-21ರಲ್ಲಿ ಯಾವುದೇ ಸಹಾಯಧನ ಬಿಡುಗಡೆ ಮಾಡಿಲ್ಲ. ಸಹಾಯಧನ ಬಾಕಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯ ನಿರ್ವಹಣಾ ವೆಚ್ಚವನ್ನು ಭರಿಸಲು ನೇಕಾರರ ವಿದ್ಯುತ್ ಸಹಾಯಧನದ ಬಾಕಿ ಮೊತ್ತವನ್ನು ಪೂರ್ಣವಾಗಿ ಬಿಡುಗಡೆ ಮಾಡುವವರೆಗೂ ಹೊಸ ನೇಕಾರ ಫಲಾನುಭವಿಗಳಿಗೆ ವಿದ್ಯುತ್ ರಿಯಾಯಿತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ’ ಎಂದರು.

ರಾಜ್ಯ ಮಟ್ಟದ ನೇಕಾರರ ಮುಖಂಡರೊಡನೆ ಸಭೆ ನಡೆಸುವುದು, ಜವಳಿ ಸಚಿವರನ್ನು ದೊಡ್ಡಬಳ್ಳಾಪುರಕ್ಕೆ ಕರೆಸಿ ಹೋರಾಟ ನಡೆಸುವ ಕುರಿತುಿ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT