ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ₹ 7.41 ಲಕ್ಷ ಕೋಟಿ ಸಂಗ್ರಹ

Last Updated 27 ಏಪ್ರಿಲ್ 2018, 19:13 IST
ಅಕ್ಷರ ಗಾತ್ರ

ನವದೆಹಲಿ : ಜಿಎಸ್‌ಟಿ ಜಾರಿಗೆ ಬಂದ ಮೊದಲ ವರ್ಷದಲ್ಲಿ ಮಾರ್ಚ್‌ ತಿಂಗಳವರೆಗೆ  ₹ 7.41 ಲಕ್ಷ ಕೋಟಿಗಳಷ್ಟು ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಇದರಲ್ಲಿ ಕೇಂದ್ರ (ಸಿಜಿಎಸ್‌ಟಿ), ರಾಜ್ಯದಿಂದ (ಎಸ್‌ಜಿಎಸ್‌ಟಿ) ಮತ್ತು ಸಮಗ್ರ ಜಿಎಸ್‌ಟಿಯಿಂದ (ಐಜಿಎಸ್‌ಟಿ) ಬಂದಿರುವ ಮೊತ್ತ ₹ 7.19ಲಕ್ಷ ಕೋಟಿ ಇದೆ. ₹ 22 ಸಾವಿರ ಕೋಟಿ ಸೆಸ್‌ ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ಈ ಹೆಚ್ಚುವರಿ ಮೊತ್ತವನ್ನು ರಾಜ್ಯಗಳಲ್ಲಿ ಜಿಎಸ್‌ಟಿ ಜಾರಿಯಿಂದ ಆಗಿರುವ ವರಮಾನ ನಷ್ಟಕ್ಕೆ ಪರಿಹಾರವಾಗಿ ನೀಡಲು ಬಳಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ವರಮಾನ ನಷ್ಟ ತುಂಬಿಕೊಡಲು ₹ 41,147 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯದ ವರಮಾನ ಮತ್ತು ನಷ್ಟದ ನಡುವಣ ಅಂತರ ಕಡಿಮೆಯಾಗತ್ತಾ ಬಂದಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಸರಾಸರಿ ತೆರಿಗೆ ಸಂಗ್ರಹವು ₹ 89 ಸಾವಿರ ಕೋಟಿ ಇದೆ. ಹೀಗಾಗಿ ಕೇಂದ್ರ ಸರ್ಕಾರ ಚಾಲ್ತಿ ಖಾತೆ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಸದ್ಯಕ್ಕೆ ಆ ತಿಂಗಳ ರಿಟರ್ನ್ಸ್‌ ಸಲ್ಲಿಸಿದ ಮೂರು ವಾರಗಳ ಬಳಿಕ ತೆರಿಗೆ ಸಂಗ್ರಹದ ಲೆಕ್ಕಾಚಾರ ಹಾಕಲಾಗುತ್ತಿದೆ.

2018–19ನೇ ಹಣಕಾಸು ವರ್ಷದಿಂದ ನಿರ್ದಿಷ್ಟ ತಿಂಗಳಿನಲ್ಲಿ ಬಂದ ತೆರಿಗೆ ವರಮಾನವನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT