ಸೋಮವಾರ, ಆಗಸ್ಟ್ 8, 2022
23 °C

ಲಾರಿ-ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲಿಯೇ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ವಿಮಾನ ನಿಲ್ದಾಣಕ್ಕೆ ಯಲಿಯೂರು ಗೇಟ್ ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಗೆ ತಮಿಳುನಾಡಿನ ನೋಂದಣಿ ಸಂಖ್ಯೆ ಇರುವ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಸಾವನಪ್ಪಿದ್ದಾರೆ.

ವೇಗವಾಗಿ ಬಂದ ಲಾರಿಯೂ ಯಲಿಯೂರು ಗೇಟ್ ಬಳಿ ಇದ್ದ ರಸ್ತೆ ಉಬ್ಬನ್ನು ತಪ್ಪಿಸಲು ಹೋಗಿ, ಚಾಲಕನ ಅಜಾಗರೂಕತೆಯಿಂದ ಮುಂದೆ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಹೋಡೆದಿದ್ದು,‌ ಸ್ಥಳದಲ್ಲಿಯೇ ಓರ್ವ ಮೃತಪಟ್ಟಿದ್ದು. ಮತ್ತೊಬ್ಬ ಸಾವರನಿಗೆ ತೀವ್ರವಾದ ಗಾಯವಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

ಸ್ನೇಹಿತರೊಬ್ಬರು ವಿದೇಶಕ್ಕೆ ತೆರಳುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಳ್ಕೋಡುಗೆ ನೀಡಲು ಬುಧವಾರ ಬೆಳಿಗ್ಗೆ ಬೈಕ್ ನಲ್ಲಿ ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.

ಮೃತರು ಚಿಕ್ಕಬಳ್ಳಾಪುರ ಮೂಲದ 'ಎಂಬಿನೇಂಜರ್' ಎಂದು ತಿಳಿದು ಬಂದಿದ್ದು, ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಎಕ್ಸ್ ರೇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಅವೈಜ್ಞಾನಿಕ ರಸ್ತೆ ಉಬ್ಬು ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು