‘ಜೈವಿಕ ಇಂಧನ ಭವಿಷ್ಯದ ಇಂಧನವಾಗಲಿ’

7
ಮುಂದಿನ 20 ವರ್ಷಗಳಲ್ಲಿ ತೈಲ ನಿಕ್ಷೇಪ ಖಾಲಿ: ಆತಂಕ

‘ಜೈವಿಕ ಇಂಧನ ಭವಿಷ್ಯದ ಇಂಧನವಾಗಲಿ’

Published:
Updated:
Deccan Herald

ದೊಡ್ಡಬಳ್ಳಾಪುರ: ತೈಲದ ಆಮದು ಹಾಗೂ ಅದರ ಅವಲಂಬನೆ ತಪ್ಪಿಸಲು ಸಸ್ಯಜನ್ಯ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಕೃಷಿ ವಲಯದ ಮೂಲಕ ಇಂಧನದ ಭದ್ರತೆ ಬಲಪಡಿಸುವ ಅಗತ್ಯ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೆಂಕಟೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ವತಿಯಿಂದ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿಶ್ವ ಜೈವಿಕ ಇಂಧನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾತೈಲ ಬಳಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ 5ನೇ ಸ್ಥಾನದಲ್ಲಿ ಇದೆ. ಶೇ85ರಷ್ಟು ಇಂಧನ ಉತ್ಪನ್ನಗಳನ್ನು ದೇಶ ಆಮದು ಮಾಡಿಕೊಳ್ಳುತ್ತಿದೆ. ಒಟ್ಟು 761 ದಶಲಕ್ಷ ಟನ್‌ಗಳಷ್ಟು ತೈಲ ನಿಕ್ಷೇಪವಿದ್ದು, ಪ್ರತಿ ವರ್ಷ 38 ದಶಲಕ್ಷ ಟನ್ ತೈಲೋತ್ಪನ್ನ ಹೊರ ತೆಗೆಯಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನು 20 ವರ್ಷಗಳಲ್ಲಿ ತೈಲ ನಿಕ್ಷೇಪ ಖಾಲಿಯಾಗಲಿದೆ ಎಂದು ವಿವರಿಸಿದರು.

ತೈಲಕ್ಕೆ ಪರ್ಯಾಯವಾಗಿ ಸಸ್ಯಜನ್ಯ ಇಂಧನ ಅಭಿವೃದ್ಧಿಪಡಿಸಿ ಕಚ್ಚಾತೈಲದ ಮೇಲಿನ ಅವಲಂಬನೆ ತಗ್ಗಿಸಬೇಕು. ಕೃಷಿ ವಲಯದ ಮೂಲಕ ಇಂಧನದ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಮಹತ್ವದ್ದಾಗಿದೆ. ಜೈವಿಕ ಇಂಧನ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರುಬಾ, ಜಟ್ರೋಫಾ, ಸುರಹೊನ್ನೆ ಗಿಡಗಳನ್ನು ಬರಡು ಭೂಮಿ, ರಸ್ತೆಯ ಬದಿಯಲ್ಲಿ ಬೆಳೆಸುವುದರ ಮುಖಾಂತರ ಜೈವಿಕ ಇಂಧನವನ್ನು ಭವಿಷ್ಯದ ಇಂಧನವಾಗಿ ಮಾರ್ಪಾಡು ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನಗೌಡ, ತೈಲವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲು ಕೊಟ್ಯಂತರ ರೂಪಾಯಿ ವಿದೇಶಿ ವಿನಿಮಯದ ಮೂಲಕ ವ್ಯವಹರಿಸಲಾಗುತ್ತಿದೆ. ಜೈವಿಕ ಇಂಧನ ಸಸ್ಯಗಳ ಬಗ್ಗೆ ಮತ್ತು ಜೈವಿಕ ಇಂಧನದ ಪ್ರಾಮುಖ್ಯತೆ ಅರಿಯದಿದ್ದರೆ ಮುಂದೆ ತೈಲಕ್ಕಾಗಿ ಯುದ್ಧ ಮಾಡುವ ಸ್ಥಿತಿ ಉಂಟಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ವಿಜ್ಞಾನಿ ಡಾ.ಬಿ.ಜಿ. ವಾಸಂತಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !