ಬಿಜೆಪಿ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಮಾವೇಶ

ಮಂಗಳವಾರ, ಮಾರ್ಚ್ 26, 2019
31 °C

ಬಿಜೆಪಿ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಮಾವೇಶ

Published:
Updated:
Prajavani

ದೊಡ್ಡಬಳ್ಳಾಪುರ: ಬಿಜೆಪಿ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಮಾವೇಶ ಮಾ.10‌ರಂದು ಚಿಕ್ಕಬಳ್ಳಾಪುರ ಶ್ರೀದೇವಿ ಕನ್ವೆನ್‌ಷನ್ ಹಾಲ್‍ನಲ್ಲಿ ನಡೆಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಸಂಚಾಲಕ ವಿಶ್ವನಾಥ್ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶವಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳೀಧರರಾವ್, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೆಗೌಡ, ಶಾಸಕ ಆರ್.ವಿಶ್ವನಾಥ್ ಭಾಗವಹಿಸಲಿದ್ದಾರೆ ಎಂದರು.

‘ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಜನರಿಗೆ ಮುಟ್ಟಿಸಲು ಈ ಸಮಾವೇಶದ ಉದ್ದೇಶವಾಗಿದೆ. ಜಾಲತಾಣದಲ್ಲಿ ಕೇವಲ ಪೋಸ್ಟರ್‌ ಹಂಚುವುದಕ್ಕೆ ಸೀಮಿತವಾಗಿರದೆ ಪೋಸ್ಟರ್‌ ರಚನೆ, ವಿಡಿಯೊ ಮಾಡುವುದು, ದಾಖಲೆ ಸಹಿತಿ ಮಾಹಿತಿ  ಹರಡುವುದರ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗುವುದು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಎಚ್.ರಂಗರಾಜ್ ಮಾತನಾಡಿ, ‘ಸಾಮಾಜಿಕ ಜಾಲತಾಣದ ಪ್ರಭಾವದಿಂದ ವಿಷಯಗಳನ್ನು ಬಹುಬೇಗ ಮುಟ್ಟಿಸಲು ಸಹಕಾರಿಯಾಗಿದೆ. ಕೇವಲ ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡದೆ, ಪ್ರಧಾನಮಂತ್ರಿ ಅವರು ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳನ್ನು ಮತದಾರರಿಗೆ ತಿಳಿಸಬೇಕಾಗಿದೆ. ಜತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ವ್ಯಾಪಕ ಪ್ರಚಾರ ನೀಡಲು ಕಾರ್ಯಕರ್ತರಿಗೆ ತರಬೇತಿ ನೀಡಲು ಈ ಸಮಾವೇಶ ನಡೆಸಲಾಗುತ್ತಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸಂಚಾಲಕ ಅರುಣ್, ಸಹ ಸಂಚಾಲಕ ಹರೀಶ್, ಶಿವಾನಂದರೆಡ್ಡಿ, ತಾಲ್ಲೂಕು ಸಂಚಾಲಕ ಚಂದೇಶ್ ಕುಮಾರ್, ಸಹ ಸಂಚಾಲಕ ಪ್ರಕಾಶ್, ಅವಿನಾಶ್‍ರೆಡ್ಡಿ, ಪ್ರಭಾರಿ ಅರವಿಂದ್, ಮುಖಂಡರಾದ ಉಮಾಮಹೇಶ್ವರಿ, ಕಮಲ, ಶ್ರೀನಿವಾಸ್, ಶಿವುಹಿಂದ್ರಿಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !